ETV Bharat / state

ಕಲಬುರಗಿಯಲ್ಲಿ ಇಂದು ಕೊರೊನಾಗೆ 6 ಬಲಿ, 152 ಸೋಂಕಿತರ ಪತ್ತೆ

author img

By

Published : Jul 26, 2020, 10:23 PM IST

ಸೋಂಕಿತರ ಸಂಖ್ಯೆ 3864 ಕ್ಕೆ ಏರಿಕೆಯಾಗಿದೆ. ಇಂದು 132 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ 2198ಗೆ ಏರಿಕೆಯಾಗಿದೆ..

corona updates in kalaburagi
ಕಲಬುರಗಿಯಲ್ಲಿ ಇಂದು ಕೊರೊನಾಗೆ 6 ಬಲಿ

ಕಲಬುರಗಿ : ಕಳೆದ ಮೂರು ದಿನಗಳಲ್ಲಿ ಒಟ್ಟು ಜಿಲ್ಲೆಯಲ್ಲಿ 15 ಜನರು ಕೊರೊನಾಗೆ ಬಲಿಯಾಗಿದ್ದಾರೆ‌. ಇಂದು ಐವರು ಪುರುಷರು ಹಾಗೂ ಓರ್ವ ಮಹಿಳೆ ಸೇರಿ ಮತ್ತೆ 6 ಜನ ನಿಧನ ಹೊಂದಿದ್ದು, ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ ‌64ಕ್ಕೆ ಏರಿಕೆಯಾಗಿದೆ.

ತೀವ್ರ ಉಸಿರಾಟ ಜೊತೆಗೆ ಹೃದ್ರೋಗದಿಂದ ಬಳಲುತ್ತಿದ್ದ ಕಲಬುರಗಿ ನಗರದ 55 ವರ್ಷದ ಪುರುಷ (P-55476), ಜುಲೈ15ರಂದು ಆಸ್ಪತ್ರೆಗೆ ದಾಖಲಾಗಿ ಜುಲೈ16 ರಂದು ನಿಧನ ಹೊಂದಿದ್ದಾರೆ. ತೀವ್ರ ಉಸಿರಾಟ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಆಳಂದ ತಾಲೂಕಿನ ಪಡಸಾವಳಿ ಗ್ರಾಮದ 58 ವರ್ಷದ ಮಹಿಳೆ (P-63509), ಜುಲೈ23ರಂದು ಆಸ್ಪತ್ರೆಗೆ ದಾಖಲಾಗಿ ಜುಲೈ 25ರಂದು ನಿಧನಗೊಂಡಿದ್ದಾರೆ.

ತೀವ್ರ ಉಸಿರಾಟ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ನಗರದ ಮೆಕ್ಕಾ ಕಾಲೋನಿ (ರೆಹಮತ್ ನಗರ) ಪ್ರದೇಶದ 70 ವರ್ಷದ ವೃದ್ಧ (P-77325), ಜುಲೈ16 ರಂದು ಆಸ್ಪತ್ರೆಗೆ ದಾಖಲಾಗಿ ಜುಲೈ18 ರಂದು ಕೊನೆ ಉಸಿರೆಳೆದಿದ್ದಾರೆ. ತೀವ್ರ ಉಸಿರಾಟ ಜೊತೆಗೆ ಮಧುಮೇಹ, ಅಧಿಕ ರಕ್ತದೊತ್ತಡ, ಹೃದ್ರೋಗದಿಂದ ಬಳಲುತ್ತಿದ್ದ ಶಹಾಬಾದ್ ಪಟ್ಟಣದ 78 ವರ್ಷದ ವೃದ್ಧ (P-91109) ಜುಲೈ20ರಂದು ಆಸ್ಪತ್ರೆಗೆ ದಾಖಲಾಗಿ ಅಂದೇ ನಿಧನಗೊಂಡಿದ್ದಾರೆ.

ತೀವ್ರ ಉಸಿರಾಟ ತೊಂದರೆ ಜೊತೆಗೆ ಅಧಿಕ ರಕ್ತದೊತ್ತಡದಿಂದ ಬಳಲುತ್ತಿದ್ದ ಕಲಬುರಗಿ ನಗರದ ಐವಾನ್-ಎ-ಶಾಹಿ ಪ್ರದೇಶದ 57 ವರ್ಷದ ಪುರುಷ (P-94463), ಜುಲೈ20 ರಂದು ಆಸ್ಪತ್ರೆಗೆ ದಾಖಲಾಗಿ ಜುಲೈ21ರಂದು ಕೊನೆ ಉಸಿರೆಳದಿದ್ದಾರೆ. ತೀವ್ರ ಉಸಿರಾಟ ತೊಂದರೆ ಜೊತೆಗೆ ಮಧುಮೇಹದಿಂದ ಬಳಲುತ್ತಿದ್ದ ಕಲಬುರಗಿ ನಗರದ ಆದರ್ಶ ನಗರ ಪ್ರದೇಶದ 48 ವರ್ಷದ ಪುರುಷ (P-94866), ಜುಲೈ20 ರಂದು ಆಸ್ಪತ್ರೆಗೆ ದಾಖಲಾಗಿ ಜುಲೈ23 ರಂದು ಕೊನೆ ಉಸಿರೆಳೆದಿದ್ದಾರೆ.

ಜಿಲ್ಲೆಯಲ್ಲಿ ಇಂದು 152 ಜನರಿಗೆ ಸೋಂಕು ದೃಢಪಟ್ಟಿದೆ. ಸೋಂಕಿತರ ಸಂಖ್ಯೆ 3864 ಕ್ಕೆ ಏರಿಕೆಯಾಗಿದೆ. ಇಂದು 132 ಜನ ಡಿಸ್ಚಾರ್ಜ್ ಆಗಿದ್ದಾರೆ. ಒಟ್ಟು ಡಿಸ್ಚಾರ್ಜ್ ಆದವರ ಸಂಖ್ಯೆ 2198ಗೆ ಏರಿಕೆಯಾಗಿದೆ. ಇನ್ನುಳಿದಂತೆ ಜಿಲ್ಲೆಯಲ್ಲಿ 1602 ಆ್ಯಕ್ಟೀವ್ ಕೇಸ್​ಗಳಿವೆ‌.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.