ಕಲಬುರಗಿ: ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದ ಮತ್ತಿಬ್ಬರು ಸಾವಿಗೀಡಾಗಿದ್ದು, ಮೃತರ ಸಂಖ್ಯೆ 200ಕ್ಕೆ ಏರಿಕೆಯಾಗಿದೆ.
ಶುಕ್ರವಾರ ನಗರದ ಬಸವೇಶ್ವರ ಕಾಲೋನಿಯ 85 ವರ್ಷದ ವೃದ್ಧ ಹಾಗೂ ಎನ್.ವಿ ಶಾಲೆ ಹಿಂದುಗಡೆ ಪ್ರದೇಶದ 43 ವರ್ಷದ ವ್ಯಕ್ತಿ ಸೋಂಕಿನಿಂದ ಮೃತಪಟ್ಟಿದ್ದಾರೆ. ತೀವ್ರ ಉಸಿರಾಟ ಸಮಸ್ಯೆಯಿಂದ ಇವರು ಮೃತಪಟ್ಟಿದ್ದಾರೆ.
ಮತ್ತೆ 222 ಜನರಿಗೆ ಕೊರೊನಾ ದೃಢಪಟ್ಟಿದೆ. 87 ಮಂದಿ ಸೋಂಕಿನಿಂದ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಸೋಂಕಿತರ ಸಂಖ್ಯೆ 11,179 ಹಾಗೂ ಗುಣಮುಖರಾದವರ ಸಂಖ್ಯೆ 9,004ಕ್ಕೆ ಏರಿಕೆಯಾಗಿದೆ. 1,975 ಸಕ್ರಿಯ ಪ್ರಕರಣಗಳಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.