ETV Bharat / state

ಕೊರೊನಾ ಕುರಿತು ಜಾಗೃತಿ ಮೂಡಿಸಲು ಮಾಸ್ಕ್​ ವಿತರಿಸಿ ಮತಯಾಚಿಸಿದ ಅಭ್ಯರ್ಥಿ - Maska distribute

ಸಿಂಧನಮಡು ಗ್ರಾಮ‌ ಪಂಚಾಯತ್​ ಸದಸ್ಯ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಸತ್ಯನಾರಾಯಣ ಮಹಾರಾಜ ಕಣಕ್ಕಿಳಿದಿದ್ದಾರೆ. ಕೊರೊನಾ ಹಿನ್ನೆಲೆ ಗ್ರಾಮದ ಮನೆ ಮನೆಗೂ ತೆರಳಿ ಮಾಸ್ಕ್ ನೀಡುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.

Candidate distributed  Maska
ಮಾಸ್ಕ್​ ನೀಡಿ ಮತಯಾಚಿಸಿದ ಅಭ್ಯರ್ಥಿ: ಸಾರ್ವಜನಿಕರಿಂದ ಮೆಚ್ಚುಗೆ
author img

By

Published : Dec 26, 2020, 6:12 PM IST

ಸೇಡಂ: ಸಮಾಜದಲ್ಲಿ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಡುವ ಮೂಲಕ ಚಿರಪರಿಚಿತರಾಗಿರುವ ಸತ್ಯನಾರಾಯಣ ಮಹಾರಾಜ, ಗ್ರಾಮ‌ ಪಂಚಾಯತ್​ ಚುನಾವಣೆಯಲ್ಲಿ ಕೊರೊನಾ ಜಾಗೃತಿ ಮೂಡಿಸುವುದರ ಜೊತೆಗೆ ಮತಯಾಚಿಸುತ್ತಿದ್ದಾರೆ.

ಮಾಸ್ಕ್​ ನೀಡಿ ಮತಯಾಚಿಸಿದ ಅಭ್ಯರ್ಥಿ: ಸಾರ್ವಜನಿಕರಿಂದ ಮೆಚ್ಚುಗೆ

ತಾಲೂಕಿನ ಸಿಂಧನಮಡು ಗ್ರಾಮ‌ ಪಂಚಾಯತ್​ ಸದಸ್ಯ ಸ್ಥಾನಕ್ಕೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸತ್ಯನಾರಾಯಣ ಮಹಾರಾಜ, ಕೊರೊನಾ ಹಿನ್ನೆಲೆಯಲ್ಲಿ ಗ್ರಾಮದ ಮನೆ ಮನೆಗೂ ತೆರಳಿ ಮಾಸ್ಕ್ ನೀಡುವ ಮೂಲಕ ಜನಜಾಗೃತಿ ಮೂಡಿಸುತ್ತಿದ್ದಾರೆ.

ಗ್ರಾಮ‌‌ ಪಂಚಾಯತ್​ ಚುನಾವಣೆಯಲ್ಲಿ‌ ಗೆಲುವು ಸಾಧಿಸಲು ಅನೇಕರು ನಾನಾ ರೀತಿಯಲ್ಲಿ ಮತದಾರರನ್ನು ಸೆಳೆಯುತ್ತಿದ್ದಾರೆ. ಈ ಸಮಯದಲ್ಲಿ ಮಾಸ್ಕ್ ನೀಡುವ ಮೂಲಕ ಕೊರೊನಾ ಜಾಗೃತಿ ಮೂಡಿಸುತ್ತಿರುವ ಇವರ ಕಾರ್ಯ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ಚುನಾವಣೆ ಎಂದಾಕ್ಷಣ ಜನರ ಮನದಲ್ಲಿ ಅಭಿವೃದ್ಧಿ‌ಯ ವಿಷಯಗಳಿಗೂ ಮಿಗಿಲಾಗಿ ಆಸೆ ಆಮಿಷಗಳನ್ನು ಅಭ್ಯರ್ಥಿಗಳು‌ ಮತದಾರರ ಮುಂದಿಡುತ್ತಾರೆ. ಇಂತಹ ಅಸಂಬದ್ಧ ಸಂಪ್ರದಾಯಕ್ಕೆ ಬ್ರೇಕ್ ಹಾಕಲು ಚುನಾವಣೆ ಎಂದರೆ ಸಕಾರಾತ್ಮಕ ಆಲೋಚನೆಗಳನ್ನು ಜನರಲ್ಲಿ‌ ಬಿತ್ತಲು ಮತ್ತು ಉತ್ತಮ ಆಡಳಿತ ನೀಡಲು ಚುನಾವಣೆಗೆ ಸ್ಪರ್ಧಿಸುತ್ತಿರುವುದಾಗಿ ಸತ್ಯನಾರಾಯಣ ಮಹಾರಾಜ ಈಟಿವಿ ಭಾರತಕ್ಕೆ ತಿಳಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.