ETV Bharat / state

ಖರ್ಗೆ ತವರಿನಲ್ಲಿ ಕಾಂಗ್ರೆಸ್ ಕಮಾಲ್.. ಕಲಬುರಗಿಯ 9 ರಲ್ಲಿ 7 ಕ್ಷೇತ್ರ ತೆಕ್ಕೆಗೆ ಪಡೆದ ಕೈಪಡೆ

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್​ ಮೇಲುಗೈ ಸಾಧಿಸಿದೆ. 9 ರಲ್ಲಿ ಏಳು ಕ್ಷೇತ್ರವನ್ನು ಗೆದ್ದು ಬೀಗಿದೆ.

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ
ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ
author img

By

Published : May 13, 2023, 10:55 PM IST

ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ ಖರ್ಗೆ ಅವರು ಮಾತನಾಡಿದರು

ಕಲಬುರಗಿ: ತೀವ್ರ ಕುತೂಹಲ ಕೆರಳಿಸಿದ್ದ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ನಿರೀಕ್ಷೆಗೂ ಮೀರಿ ಕಾಂಗ್ರೆಸ್ ಅಭೂತಪೂರ್ವ ಸಾಧನೆ ಮಾಡಿದ್ರೆ, ಕಮಲಪಾಳಯ ಸೋತು ಸುಣ್ಣವಾಗಿದೆ. ಅದರಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಕಾಂಗ್ರೆಸ್ ಮೇಲುಗೈ ಸಾಧಿಸಿದ್ದು, ಎಐಸಿಸಿ ಅಧ್ಯಕ್ಷ ಖರ್ಗೆ ತವರಲ್ಲಿ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ನಡೆಸಿದ್ದ ಕ್ಷೇತ್ರಗಳಲ್ಲೇ ಬಿಜೆಪಿ ಹೀನಾಯವಾಗಿ ಸೋತಿದೆ. ಕಲಬುರಗಿ ಜಿಲ್ಲೆಯ‌ 9 ವಿಧಾನಸಭಾ ಕ್ಷೇತ್ರಗಳಲ್ಲಿ ಏಳು ಕ್ಷೇತ್ರ ಕೈಪಡೆ ತನ್ನ ಮಡಿಲಿಗೆ ಹಾಕಿಕೊಂಡಿದ್ದು, ಕಳೆದ ಎರಡು ಚುನಾವಣೆಗಳಿಂದ ನಿಧಾನವಾಗಿ ಕೈ ಜಾರುತ್ತಿದ್ದು, ಕ್ಷೇತ್ರವನ್ನು ಕಾಂಗ್ರೆಸ್ ಈಗ ಮತ್ತೆ ಭದ್ರಕೋಟೆ ಮಾಡಿಕೊಳ್ಳುವಲ್ಲಿ ಯಶಸ್ಸು ಕಂಡಿದೆ.

ಹೌದು, ಕಾಂಗ್ರೆಸ್‌ನ ಭದ್ರಕೋಟೆಯಾಗಿದ್ದ ಕಲ್ಯಾಣ ಕರ್ನಾಟಕವನ್ನು ಕಳೆದ ಬಾರಿ ಬಿಜೆಪಿ ವಶಕ್ಕೆ ಪಡೆದಿತ್ತು‌. ಆದರೆ ಈ ಬಾರಿ ಎಐಸಿಸಿ ಅಧ್ಯಕ್ಷರಾಗಿ ಆಯ್ಕೆಯಾದ ಮಲ್ಲಿಕಾರ್ಜುನ ಖರ್ಗೆಯವರ ಮಾಸ್ಟರ್ ಪ್ಲಾನ್‌ನಿಂದ ಕಲ್ಯಾಣ ಕರ್ನಾಟಕವನ್ನು ಮರಳಿ ವಶಕ್ಕೆ ಪಡೆಯುವಲ್ಲಿ ಸಕ್ಸಸ್ ಆಗಿದೆ. ರಾಜ್ಯದಲ್ಲಿ ಆಡಳಿತರೂಢ ಬಿಜೆಪಿಯ ಆಟ ಅಂತ್ಯವಾಗಿದ್ದು, ನಿರೀಕ್ಷೆಗೂ ಮೀರಿ ಕಾಂಗ್ರೆಸ್ ಭರ್ಜರಿ ಜಯ ದಾಖಲಿಸಿದೆ‌. ಪ್ರಮುಖವಾಗಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಬಿಜೆಪಿ ಧೂಳಿಪಟವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ರೋಡ್ ಶೋ ಮತ್ತು ಸಮಾವೇಶ ನಡೆಸಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಹೀನಾಯವಾಗಿ ಸೋತಿರುವುದು ಗಮನಾರ್ಹವಾಗಿದೆ.

ಕಲ್ಯಾಣ ಕರ್ನಾಟಕ ಭಾಗದ ಹೆಬ್ಬಾಗಿಲು ಕಲಬುರಗಿಯಲ್ಲಿ 9 ವಿಧಾನಸಭಾ ಕ್ಷೇತ್ರಗಳ ಪೈಕಿ ಆಳಂದ, ಅಫಜಲಪುರ, ಜೇವರ್ಗಿ, ಸೇಡಂ, ಕಲಬುರಗಿ ಉತ್ತರ ಕ್ಷೇತ್ರ, ಕಲಬುರಗಿ ದಕ್ಷಿಣ, ಮತ್ತು ಚಿತ್ತಾಪುರ ಕ್ಷೇತ್ರ ಸೇರಿದಂತೆ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಹುರಿಯಾಳುಗಳು ಭರ್ಜರಿ ಜಯ ದಾಖಲಿಸಿದ್ರೆ, ಕಲಬುರಗಿ ಗ್ರಾಮೀಣ ಮತ್ತು ಚಿಂಚೋಳಿ ಕ್ಷೇತ್ರಗಳಲ್ಲಿ ಬಿಜೆಪಿ ಹಾಲಿ ಶಾಸಕರು ಮಾತ್ರ ಗೆಲುವು ದಾಖಲಿಸುವಲ್ಲಿ ಯಶಸ್ವಿಯಾಗಿದೆ.

ಅಭ್ಯರ್ಥಿಗಳ‌ ಗೆಲುವಿನ ಅಂಕಿಸಂಖ್ಯೆ:

ಕಲಬುಬುರಗಿ ಗ್ರಾಮೀಣ...
ಬಿಜೆಪಿ ಅಭ್ಯರ್ಥಿ ಬಸವರಾಜ್ ಮತ್ತಿಮಡು - 84,466
ಕಾಂಗ್ರೆಸ್ ಅಭ್ಯರ್ಥಿ ರೇವು ನಾಯಕ್ - 71,839
ಗೆಲುವಿನ ಅಂತರ -12,627
ಒಟ್ಟು ಮತಗಳು: 2,57,752
ಚಲಾವಣೆಯಾದ ಮತಗಳು: 1,61,280
ನೋಟಾ :839
ತಿರಸ್ಕೃತಗೊಂಡ ಮತಗಳು: 37

ಕಲಬುರಗಿ ದಕ್ಷಿಣ...
ಕಾಂಗ್ರೆಸ್ ಅಭ್ಯರ್ಥಿ ಅಲ್ಲಮಪ್ರಭು ಪಾಟೀಲ್ - 87,345
ಬಿಜೆಪಿ ಅಭ್ಯರ್ಥಿ ದತ್ತಾತ್ರೇಯ ಪಾಟೀಲ್- 66,297
ಗೆಲುವಿನ ಅಂತರ - 21,048
ಒಟ್ಟು ಮತಗಳು: 2,79,251
ಚಲಾವಣೆಯಾದ ಮತಗಳು: 1,58,283
ನೋಟಾ :1284
ತಿರಸ್ಕೃತಗೊಂಡ ಮತಗಳು:222

ಕಲಬುರ್ಗಿ ಉತ್ತರ:
ಕಾಂಗ್ರೆಸ್ ಅಭ್ಯರ್ಥಿ ಕನ್ನಿಜ್ ಫಾತೀಮಾ -80,973
ಬಿಜೆಪಿ ಅಭ್ಯರ್ಥಿ ಚಂದು ಪಾಟೀಲ್- 78,261
ಗೆಲುವಿನ ಅಂತರ -2712
ಒಟ್ಟು ಮತಗಳು:3,07,091
ಚಲಾವಣೆಯಾದ ಮತಗಳು: 1,77,911
ನೋಟಾ :934
ತಿರಸ್ಕೃತಗೊಂಡ ಮತಗಳು: 658

ಜೇವರ್ಗಿ..
ಕಾಂಗ್ರೆಸ್ ಅಭ್ಯರ್ಥಿ ಅಜಯ್ ಸಿಂಗ್ - 70,810
ಜೆಡಿಎಸ್ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ್ - 60,532
ಬಿಜೆಪಿ ಅಭ್ಯರ್ಥಿ ಶಿವರಾಜ್ ರದ್ದೇವಾಡಗಿ- 29,564
ಗೆಲುವಿನ ಅಂತರ - 10,278
ಒಟ್ಟು ಮತಗಳು: 2,39,914
ಚಲಾವಣೆಯಾದ ಮತಗಳು:1,66,258
ನೋಟಾ : 1146
ತಿರಸ್ಕೃತಗೊಂಡ ಮತಗಳು: 62

ಅಫಜಲಪುರ..
ಕಾಂಗ್ರೆಸ್ ಅಭ್ಯರ್ಥಿ ಎಂ. ವೈ ಪಾಟೀಲ್ - 56,313
ಪಕ್ಷೇತರ ಅಭ್ಯರ್ಥಿ ನಿತಿನ್ ಗುತ್ತೇದಾರ್- 51,719
ಬಿಜೆಪಿ ಅಭ್ಯರ್ಥಿ ಮಾಲೀಕಯ್ಯ ಗುತ್ತೇದಾರ್- 31,394
ಗೆಲುವಿನ ಅಂತರ - 4,594
ಒಟ್ಟು ಮತಗಳು: 228171
ಚಲಾವಣೆಯಾದ ಮತಗಳು: 158714
ನೋಟಾ : 1608
ತಿರಸ್ಕೃತಗೊಂಡ ಮತಗಳು: 440

ಆಳಂದ...
ಕಾಂಗ್ರೆಸ್ ಅಭ್ಯರ್ಥಿ ಬಿ. ಆರ್. ಪಾಟೀಲ್ - 89,508
ಬಿಜೆಪಿ ಅಭ್ಯರ್ಥಿ ಸುಭಾಷ್​ ಗುತ್ತೇದಾರ- 79,160
ಗೆಲುವಿನ ಅಂತರ - 10,348
ಒಟ್ಟು ಮತಗಳು: 2,41,749
ಚಲಾವಣೆಯಾದ ಮತಗಳು:1,73,272
ನೋಟಾ :1316
ತಿರಸ್ಕೃತಗೊಂಡ ಮತಗಳು: 392

ಚಿತ್ತಾಪುರ...
ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್​ ಖರ್ಗೆ-81,323
ಬಿಜೆಪಿ ಅಭ್ಯರ್ಥಿ ಮಣಿಕಂಠ ರಾಠೋಡ್-67,683
ಗೆಲುವಿನ ಅಂತರ - 13,640
ಒಟ್ಟು ಮತಗಳು: 2,35,755
ಚಲಾವಣೆಯಾದ ಮತಗಳು:1,52,379
ನೋಟಾ :816
ತಿರಸ್ಕೃತಗೊಂಡ ಮತಗಳು:47

ಚಿಂಚೋಳಿ..
ಬಿಜೆಪಿ ಅಭ್ಯರ್ಥಿ ಅವಿನಾಶ ಜಾದವ್- 69,963
ಕಾಂಗ್ರೆಸ್ ಅಭ್ಯರ್ಥಿ ಸುಭಾಷ್​ ರಾಠೋಡ್-69,105
ಗೆಲುವಿನ ಅಂತರ - 858
ಒಟ್ಟು ಮತಗಳು: 2,03,600
ಚಲಾವಣೆಯಾದ ಮತಗಳು:1,48,937
ನೋಟಾ :1003

ತಿರಸ್ಕೃತಗೊಂಡ ಮತಗಳು:150

ಸೇಡಂ...
ಕಾಂಗ್ರೆಸ್ ಅಭ್ಯರ್ಥಿ ಶರಣ ಪ್ರಕಾಶ ಪಾಟೀಲ್ - 93,377
ಬಿಜೆಪಿ ಅಭ್ಯರ್ಥಿ ರಾಜಕುಮಾರ ಪಾಟೀಲ್- 49,816
ಜೆಡಿಎಸ್ ಅಭ್ಯರ್ಥಿ ಬಾಲರಾಜ ಗುತ್ತೇದಾರ್- 21,125
ಗೆಲುವಿನ ಅಂತರ - 43,561
ಒಟ್ಟು ಮತಗಳು:2,25,688
ಚಲಾವಣೆಯಾದ ಮತಗಳು: 1,75,306
ನೋಟಾ : 691
ತಿರಸ್ಕೃತಗೊಂಡ ಮತಗಳು: 65

ಆಡಳಿತ‌ ಯಂತ್ರದಲ್ಲಿ ಸಿಗುತ್ತಾ? ಮಹತ್ವದ ಸ್ಥಾನಮಾನ: ಬಿಜೆಪಿ ಸರ್ಕಾರ ಅಸ್ತಿತ್ವದಲ್ಲಿದ್ದಾಗ ಕಲಬುರಗಿ ಜಿಲ್ಲೆಗೆ ಮಂತ್ರಿ ಸ್ಥಾನ ಸಿಕ್ಕಿರಲಿಲ್ಲ. ಹೀಗಾಗಿ ಈ ಬಾರಿ ರಾಜ್ಯದಲ್ಲಿ ಪೂರ್ಣಬಹುಮತದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಹಿನ್ನೆಲೆಯಲ್ಲಿ ಮತ್ತು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ರಾಜ್ಯದವರೆ ಆಗಿದ್ದರಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ಮತ್ತು ವಿಶೇಷವಾಗಿ ಕಲಬುರಗಿ ಜಿಲ್ಲೆಗೆ ಹೆಚ್ಚಿನ ಸಚಿವ ಸ್ಥಾನ ಸಿಗುವ ನಿಟ್ಟಿನಲ್ಲಿ ಎಐಸಿಸಿ ಅಧ್ಯಕ್ಷರ ಮೇಲೆ ಒತ್ತಡ ಹಾಕುವುದಾಗಿ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.

ಇತ್ತ ಕಾಂಗ್ರೆಸ್ ರಾಜ್ಯದ ಜನರಿಗೆ ಐದು ಭರವಸೆಗಳನ್ನು ನೀಡಿತ್ತು. ನಾನು ಆರನೇ ಭರವಸೆ ಚಿತ್ತಾಪುರದಿಂದ ನೀಡುತ್ತಿದ್ದು, ಭ್ರಷ್ಟ ಅಧಿಕಾರಿಗಳನ್ನ ಮತ್ತು ಬಿಜೆಪಿ ಸರ್ಕಾರದ ಅವಧಿಯಲ್ಲಿನ ಪಿಎಸ್‌ಐ ಪರೀಕ್ಷಾ ಹಗರಣ, ಬಿಟ್ ಕಾಯಿನ್ ಹಗರಣ, ಗಂಗಾ ಕಲ್ಯಾಣ ಯೋಜನೆ ಹಗರಣ ಸೇರಿದಂತೆ ಅನೇಕ ‌ಹಗರಣಗಳನ್ನ ತಾರ್ಕಿಕ ಅಂತ್ಯ ಕಾಣಿಸುವುದಾಗಿ ಪ್ರಿಯಾಂಕ್ ಖರ್ಗೆ ಬಿಜೆಪಿ ವಿರುದ್ಧ ಗುಡುಗಿದ್ದಾರೆ.

ಒಟ್ಟಿನಲ್ಲಿ ರಾಜ್ಯ ಬಿಜೆಪಿ ಅತಿಯಾಗಿ ಪ್ರಧಾನಿ ನರೇಂದ್ರ ಮೋದಿಯವರ ಅಲೆಯಲ್ಲಿ ಕೊಚ್ಚಿಹೋಗಿದ್ದು, ಇಡೀ ರಾಜಕೀಯ ಪಂಡಿತರ ಮತ್ತು ಎಲ್ಲಾ ಸಮೀಕ್ಷೆಗಳನ್ನ ಧೂಳಿಪಟ ಮಾಡಿ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ತರುವಲ್ಲಿ ಕಾಂಗ್ರೆಸ್ ನಾಯಕರು ಸಕ್ಸಸ್ ಆಗಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌‌ಗೆ ಮತ್ತಷ್ಟು ಆತ್ಮವಿಶ್ವಾಸ ಬಂದಂತಾಗಿದೆ.

ಇದನ್ನೂ ಓದಿ: ದಕ್ಷಿಣ ಭಾರತ ಬಿಜೆಪಿ ಮುಕ್ತವಾಗಿದೆ, ನಾನು ಕರ್ನಾಟಕದ ಭೂಮಿ ಪುತ್ರ : ಮೋದಿಗೆ ಮಲ್ಲಿಕಾರ್ಜುನ ಖರ್ಗೆ ಟಾಂಗ್​

ETV Bharat Logo

Copyright © 2024 Ushodaya Enterprises Pvt. Ltd., All Rights Reserved.