ಕಲಬುರಗಿ: ನಾಳೆ ಸಚಿವ ಸಂಪುಟ ವಿಸ್ತರಣೆ ಖಚಿತ. ಆದರೆ, ಎಷ್ಟು ಜನ ಸೇರ್ಪಡೆಯಾಗುತ್ತಾರೆ, ಯಾರು ಸೇರ್ಪಡೆಯಾಗುತ್ತಾರೆ ಎಂಬ ಸ್ಪಷ್ಟ ಮಾಹಿತಿಯಿಲ್ಲ ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.
ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆಗಮಿಸಿದ ವೇಳೆ ಏರ್ಪೋರ್ಟ್ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, ನಾಳೆ ಸಂಪುಟ ವಿಸ್ತರಣೆ ಖಚಿತ. ಆದರೆ, ಎಷ್ಟು ಜನ ಸೇರ್ತಾರೆ. ಯಾರನ್ನ ಸೇರಿಸಬೇಕು ಎಂಬುದರ ಬಗ್ಗೆ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ. ಇಂದು ಸಂಜೆ ಹೈಕಮಾಂಡ್ನಿಂದ ಮಾಹಿತಿ ಬಂದ ನಂತರ ಸ್ಪಷ್ಟತೆ ಸಿಗಲಿದೆ ಎಂದರು.
ಮಾರ್ಚ್ 5ರಂದು ರಾಜ್ಯ ಬಜೆಟ್ ಮಂಡನೆ ಮಾಡುತ್ತೇನೆ. ರೈತರಿಗೆ ಮಹಿಳೆಯರಿಗೆ ಅನುಕೂಲಕರವಾದ ಬಜೆಟ್ ಮಂಡಿಸಲಾಗುವುದು. ಯಾರಿಗೂ ಭೇದ-ಭಾವ ಮಾಡದೇ, ಬಜೆಟ್ನಲ್ಲಿ ಹಂಚಿಕೆ ಮಾಡುವುದಾಗಿ ತಿಳಿಸಿದರು. ಉಮೇಶ್ ಕತ್ತಿ ಮತ್ತಿತರರ ಸೇರ್ಪಡೆ ವಿಷಯವಾಗಿ ಕೇಳಿದ ಪ್ರಶ್ನೆಗೆ ಸಿಎಂ ಯಾವುದೇ ಪ್ರತಿಕ್ರಿಯೆ ನೀಡದೇ ಹೊರಟುಹೋದರು.