ಕಲಬುರಗಿ: ಯುವಕರು ಈ ದೇಶದ ದೊಡ್ಡ ಶಕ್ತಿ. ಆದ್ರೆ ವಿಪರ್ಯಾಸ ಎಂದರೆ ಈ ಭಾಗದ ಯುವಜನತೆ ಕ್ರಾಂತಿಯೋಗಿ ಬಸವಣ್ಣನವರ ಕಾಯಕ ತತ್ವ ಮರೆತು ಹೋಗುತ್ತಿದ್ದಾರೆ ಎಂದು ಯುವ ಬ್ರಿಗೇಡ್ ಸಂಸ್ಥಾಪಕ, ಬರಹಗಾರ ಹಾಗೂ ಖ್ಯಾತ ವಾಗ್ಮಿ ಚಕ್ರವರ್ತಿ ಸೂಲಿಬೆಲೆ ಕಳವಳ ವ್ಯಕ್ತಪಡಿಸಿದರು.
ಜಿಲ್ಲೆಯ ಚಿತ್ತಾಪುರ ತಾಲೂಕಿನ ರಾವೂರು ಗ್ರಾಮದಲ್ಲಿ ಜರುಗಿದ ರಾಮಲಿಂಗೇಶ್ವರ ದೇವಸ್ಥಾನ ಹಾಗೂ ರಾಮಬಾವಿ ಸ್ವಚ್ಛತಾ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು. ಯುವಶಕ್ತಿ ದೇಶದ ದೊಡ್ಡ ಶಕ್ತಿ, ಆದರೆ ಯುವಕರು ಈ ಭಾಗದ ಕ್ರಾಂತಿಯೋಗಿ ಬಸವಣ್ಣನವರ ಕಾಯಕ ತತ್ವ ಮರೆತು ಹೋಗುತ್ತಿದ್ದಾರೆ. ಯುವಕರು ನಿಸ್ವಾರ್ಥ ಮನೋಭಾವದಿಂದ ಸಮಾಜ ಕಾರ್ಯದಲ್ಲಿ ಭಾಗವಹಿಸಬೇಕು. ರಾಮಬಾವಿ ಪ್ರದೇಶವನ್ನು ಸಂಪೂರ್ಣ ಸ್ವಚ್ಛಗೊಳಿಸಿ ಆ ಪ್ರದೇಶದಲ್ಲಿ ಭಾರತ ಮಂದಿರ ನಿರ್ಮಿಸುವ ಸಂಕಲ್ಪ ತೊಡಬೇಕು ಗ್ರಾಮದ ಯುವಕರಿಗೆ ಕರೆ ಕೊಟ್ಟರು.
ಈ ಸುದ್ದಿಯನ್ನೂ ಓದಿ: ಆದಿತ್ಯ ಆಳ್ವ ಬಂಧನ: ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ ಸಿಸಿಬಿ
ಸಿದ್ದಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ಸಿದ್ದಲಿಂಗ ಸ್ವಾಮಿ ಸೇರಿದಂತೆ ಅನೇಕರು ಸ್ವಚ್ಛತಾ ಶಿಬಿರದಲ್ಲಿ ಭಾಗವಹಿಸಿದ್ದರು.