ETV Bharat / state

'ಕೆ.ಎಸ್. ಭಗವಾನ್ ಮುಖಕ್ಕೆ ಮಸಿ ಬಳಿದವರು ಭಂಡರು' - ಆಳಂದ ಮಾಜಿ ಶಾಸಕ ಬಿ.ಆರ್. ಪಾಟೀಲ್

ಸಾಹಿತಿ ಕೆ.ಎಸ್. ಭಗವಾನ್ ಅವರ ಮುಖಕ್ಕೆ ಮಸಿ ಬಳಿದ ಪ್ರಕರಣ ಹಾಗೂ ಅದಕ್ಕೆ ವಿಶ್ವ ಹಿಂದೂ ಪರಿಷತ್ ಸಮರ್ಥಿಸಿಕೊಂಡಿದ್ದನ್ನು ಮಾಜಿ ಶಾಸಕ ಬಿ.ಆರ್. ಪಾಟೀಲ ಖಂಡಿಸಿದ್ದಾರೆ.

B.R. Patil statement
ಳಂದ ಮಾಜಿ ಶಾಸಕ ಬಿ.ಆರ್. ಪಾಟೀಲ್
author img

By

Published : Feb 7, 2021, 7:38 PM IST

ಕಲಬುರಗಿ: ಕರ್ನಾಟಕದ ಜನತೆ ಶಾಂತಿ ಪ್ರಿಯರು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆಯ ಮೇಲೆ ನಂಬಿಕೆ ಇಲ್ಲದವರು ಸಾಹಿತಿ ಪ್ರೊ. ಕೆ.ಎಸ್. ಭಗವಾನ್ ಅವರ ಮುಖಕ್ಕೆ ಮಸಿ ಬಳಿಯುವ ಕೆಲಸ ಮಾಡಿದ್ದಾರೆ ಎಂದು ಆಳಂದ ಮಾಜಿ ಶಾಸಕ ಬಿ.ಆರ್. ಪಾಟೀಲ ಹೇಳಿದರು.

ದೇಶದ ಕಾನೂನಿಗೆ ಬಗ್ಗೆ ಗೌರವ ಹೊಂದಿರುವ ಭಗವಾನ್ ಅವರು ವಿಚಾರಣೆಗೆಂದು ಕೊರ್ಟ್‌ಗೆ ಹಾಜರಾದಾಗ, ಮಹಿಳಾ ವಕೀಲೆ ಮುಖಕ್ಕೆ ಮಸಿ ಬಳಿದು ಉದ್ಧಟತನ ತೋರಿದ್ದಾರೆ. ಈ ಘಟನೆಯನ್ನು ಕಲಬುರಗಿಯಲ್ಲಿ ವಿಶ್ವ ಹಿಂದೂ ಪರಿಷತ್ ಸಮರ್ಥನೆ ಮಾಡಿಕೊಂಡಿರುವುದು ಖಂಡನೀಯ ಎಂದರು.

ಳಂದ ಮಾಜಿ ಶಾಸಕ ಬಿ.ಆರ್. ಪಾಟೀಲ್

ಇವರ ವರ್ತನೆಯಿಂದ ಇವರು ಎಷ್ಟು ಭಂಡರು ಅನ್ನೋದು ಗೊತ್ತಾಗುತ್ತೆ. ಯಾರೂ ಇವರ ವಿರುದ್ಧ ಧ್ವನಿ ಎತ್ತಬಾರದು, ಧ್ವನಿಯೆತ್ತಿದರೆ ಸುಳ್ಳು ಕೇಸು ದಾಖಲಿಸಿ ಹೆದರಿಸುತ್ತಾರೆ. ಹೋರಾಟ, ಪ್ರತಿಭಟನೆ ಪ್ರತಿಯೊಬ್ಬನ ಹಕ್ಕು, ಪ್ರತಿಯೊಬ್ಬರೂ ಪ್ರಜಾಪ್ರಭುತ್ವದ ಮೇಲೆ ಗೌರವ ಇಟ್ಟು ನಡೆಯಬೇಕು. ಹೀಗಿರುವಾಗ ಮುಖಕ್ಕೆ ಮಸಿ ಬಳಿದು ಅಪಮಾನ ಮಾಡಿದ್ದು ಖಂಡನೀಯ ಎಂದು ಪಾಟೀಲ ಹೇಳಿದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.