ETV Bharat / state

ಶೂಟ್​ ಮಾಡೋದಾದರೆ ಮಾಡಿ.. ನಾವೂ ನಿಮಗೆ ಶೂಟ್ ಮಾಡ್ತೇವೆ: ಪ್ರಿಯಾಂಕ್​ಗೆ ಬಿಜೆಪಿ ಮುಖಂಡನ ಎಚ್ಚರಿಕೆ - ಬಿಜೆಪಿಯವರಿಗೆ ಓಡಾಡಲು ಬಿಡುವುದಿಲ್ಲ ಎಂದ ಪ್ರಿಯಾಂಕ್​

ಕಲಬುರಗಿ ಜಿಲ್ಲೆಯಲ್ಲಿ ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಮತ್ತು ಬಿಜೆಪಿ ಮುಖಂಡ ಮಣಿಕಂಠ ರಾಠೋಡ್ ನಡುವೆ ಮಾತಿನ ಸಮರ ನಡೆದಿದೆ.

bjp-leader-manikanta-rathod-warning-to-mla-priyank-kharge-in-kalaburagi
ಶೂಟ್​ ಮಾಡೋದಾದರೆ ಮಾಡಿ... ನಾವೂ ನಿಮಗೆ ಶೂಟ್ ಮಾಡ್ತೇವೆ: ಪ್ರಿಯಾಂಕ್​ಗೆ ಬಿಜೆಪಿ ಮುಖಂಡನ ಎಚ್ಚರಿಕೆ
author img

By

Published : Nov 12, 2022, 4:07 PM IST

ಕಲಬುರಗಿ: ಜಿಲ್ಲಾ ರಾಜಕಾರಣದಲ್ಲಿ ಗನ್ ಹಿಡಿದು ಶೂಟ್ ಮಾಡುವ ಮಾತಿನ ಮಟ್ಟಿನ ರಾಜಕಾರಣ ನಡೆದಿದೆ. ಬಿಜೆಪಿಯವರಿಗೆ ಓಡಾಡಲು ಬಿಡುವುದಿಲ್ಲ ಎಂದು ಕಾಂಗ್ರೆಸ್​ ಮುಖಂಡ, ಚಿತ್ತಾಪುರ ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದ್ದು, ಇದಕ್ಕೆ ಪ್ರತಿಯಾಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್, ನೀವು ಎಕೆ 47ನಿಂದ ಶೂಟ್​ ಮಾಡಿದರೂ ನಾವು ಸಾಯಲು ಸಿದ್ಧ ಮತ್ತು ಶೂಟ್​ ಮಾಡಲೂ ಸಿದ್ಧ ಎಂದು ಹೇಳಿದ್ದಾರೆ.

ಶೂಟ್​ ಮಾಡೋದಾದರೆ ಮಾಡಿ... ನಾವೂ ನಿಮಗೆ ಶೂಟ್ ಮಾಡ್ತೇವೆ: ಪ್ರಿಯಾಂಕ್​ಗೆ ಬಿಜೆಪಿ ಮುಖಂಡನ ಎಚ್ಚರಿಕೆ

ಇತ್ತೀಚೆಗೆ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ್ದ ಪ್ರಿಯಾಂಕ್​ ಖರ್ಗೆ, ನಿಮಗೆ (ಬಿಜೆಪಿಯವರಿಗೆ) ನಿಜವಾಗಿ ರಾಜಕೀಯ ಮಾಡಬೇಕೆಂದರೇ, ನಿಮಗಿಂತ ನೂರು ಪಟ್ಟು ರಾಜಕೀಯ ಮಾಡುವ ಅನುಭವ ನಮಗೂ ಇದೆ. ನೀವು (ಬಿಜೆಪಿಯವರು) ಹೇಗೆಲ್ಲ ಮಾಡಿದರೆ, ಜಿಲ್ಲೆಯಲ್ಲಿ ಕಾಂಗ್ರೆಸ್​ನವರು ಸತ್ತೋಗಿಲ್ಲ. ನಾವು ಮನಸ್ಸು ಮಾಡಿದರೆ ಬಿಜೆಪಿ ನಾಯಕರಿಗೆ ಓಡಾಡಲು ಬಿಡೋದಿಲ್ಲ ಎಂದು ಹೇಳಿದ್ದರು.

ಇದಕ್ಕೆ ಪ್ರತ್ಯುತ್ತರವಾಗಿ ಬಿಜೆಪಿ ಮುಖಂಡ ಮಣಿಕಂಠ ರಾಠೋಡ್​ ಮಾತನಾಡಿ, ನಾವು ನಮ್ಮ ಎಲ್ಲ ಸಮಾಜಕ್ಕೆ ಸೇನೆಯಂತೆ ನಿಂತಿದ್ದೇವೆ. ನೀವು ನಮ್ಮನ್ನು ಎಕೆ 47ನಿಂದ ಶೂಟ್​ ಮಾಡೋದಿದೆಯೋ, ತೋಪ್​ನಿಂದ ಶೂಟ್​ ಮಾಡೋದಿದೆಯೋ ಮಾಡ್ರಿ ಸಾಯಲು ಸಿದ್ಧರಿದ್ದೇವೆ. ನಾವು ನಿಮಗೂ ಶೂಟ್​ ಮಾಡುಲು ತಯಾರಿದ್ದೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: ಪ್ರಿಯಾಂಕ್ ಖರ್ಗೆ ನಾಪತ್ತೆ ಪೋಸ್ಟರ್ ಅಳವಡಿಕೆ​​ : ಕೆರಳಿದ ಅಭಿಮಾನಿಗಳಿಂದ ಪ್ರತಿಭಟನೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.