ಕಲಬುರಗಿ: ಭಾರತ ಕೊರೊನಾ ಮುಕ್ತವಾಗಲೆಂದು ಪಾರ್ಥಿಸಿ ಸ್ವಾಮೀಜಿಯೊಬ್ಬರು ಮೌನ ಅನುಷ್ಠಾನ ಕೈಗೊಂಡಿದ್ದಾರೆ.
ಜಿಲ್ಲೆಯ ಚಿತ್ತಾಪುರ ತಾಲೂಕಿನ ದಂಡಗುಂಡ ಗುಡ್ಡದಲ್ಲಿರುವ ಭೀಮಲಿಂಗೇಶ್ವರ ದೇವಸ್ಥಾನದಲ್ಲಿ ಭೀಮನ್ ಗುಡ್ಡದ್ ಎಂಬ ಸ್ವಾಮೀಜಿ 41 ದಿನಗಳ ಕಾಲ ಮೌನ ಅನುಷ್ಠಾನಕ್ಕೆ ಕುಳಿತಿದ್ದಾರೆ.
ಮಹಾಮಾರಿ ಕೊರೊನಾದಿಂದ ದೇಶ ಮುಕ್ತವಾಗಿ ಶಾಂತಿ, ಸಹಬಾಳ್ವೆ ನೆಲೆಸಲಿ ಎಂದು 41 ದಿನಗಳ ಕಾಲ ಅನ್ನ, ನೀರು ತ್ಯಜಿಸಿ ದೇವಸ್ಥಾನದ ಒಳಗಡೆ ಮೌನ ಅನುಷ್ಠಾನ ಕೈಗೊಂಡಿರುವುದಾಗಿ ಸ್ವಾಮೀಜಿ ತಿಳಿಸಿದ್ದಾರೆ.
ಒಂದು ಕಡೆ ವೈದ್ಯರು, ಪೊಲೀಸರು ಸೇರಿದಂತೆ ಅನೇಕರು ಕೊರೊನಾ ನಿಯಂತ್ರಣಕ್ಕೆ ಹೋರಾಡುತ್ತಿದ್ದಾರೆ. ಇನ್ನೊಂದೆಡೆ ದೈವ ಭಕ್ತರು ದೇವರ ಮೊರೆ ಹೋಗಿ ತಪಸ್ಸು, ಮೌನ ವ್ರತ, ವಿಷೇಶ ಪೂಜೆ ಸಲ್ಲಿಸುವ ಮೂಲಕ ದೇಶವನ್ನು ಕೊರೊನಾ ಮುಕ್ತಗೊಳಿಸಲು ಮುಂದಾಗಿದ್ದಾರೆ.