ಕಲಬುರಗಿ: 371 ಜೆ ಪರಿಣಾಮಕಾರಿ ಜಾರಿಗೆ ಆಗ್ರಹಿಸಿ ಕಲಬುರಗಿಯಲ್ಲಿ ಅಹಿಂದ ಚಿಂತಕರ ವೇದಿಕೆ ಕಾರ್ಯಕರ್ತರು ಜಾಗೃತಿ ಜಾಥಾ ನಡೆಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ವೇದಿಕೆ ಅಧ್ಯಕ್ಷ ಸಾಯಿಬಣ್ಣಾ ಜಮಾದಾರ್ ನೇತೃತ್ವದಲ್ಲಿ ಕಲ್ಯಾಣ ಕರ್ನಾಟಕದ ಆರು ಜಿಲ್ಲೆಗಳಲ್ಲಿ ಜಾಥಾ ನಡೆಸಿದ ಕಾರ್ಯಕರ್ತರು, ಜಿಲ್ಲಾಧಿಕಾರಿ ಕಚೇರಿಗೆ ತಲುಪಿ ಡಿಸಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ಹಿಂದುಳಿದ ಭಾಗ ಎಂದು ಕಲ್ಯಾಣ ಕರ್ನಾಟಕಕ್ಕೆ 371 ಜೆ ಸ್ಥಾನಮಾನ ನೀಡಲಾಗಿದೆ. ಆದ್ರೀಗ 371 ಜೆ ಉದ್ದೇಶ ಪೂರ್ವಕವಾಗಿ ಹಿಂದೆ ತಳ್ಳಲಾಗುತ್ತಿದೆ.
ಸರ್ಕಾರ ವಿಳಂಬ ಮಾಡದೇ, ಕೂಡಲೇ 371 ಜೆ ಪರಿಣಾಮಕಾರಿಯಾಗಿ ಜಾರಿಗೆ ತರಬೇಕು ಹಾಗೂ ಮುಂಬಡ್ತಿ ನ್ಯೂನತೆಗಳನ್ನು ಸರಿಪಡಿಸಬೇಕು. ಕಲ್ಯಾಣ ಕರ್ನಾಟಕ ಹೊರತುಪಡಿಸಿ ಉಳಿದೆಲ್ಲ ಜಿಲ್ಲೆಗಳಿಗೆ ಶೇ. 8ರಷ್ಟು ಮೀಸಲಾತಿ ನೀಡಬೇಕು. 371 ಜೆ ವಿಶೇಷ ಕೋಶ ಬೆಂಗಳೂರಲ್ಲಿಯೇ ಇದೆ. ಅದನ್ನು ಕಲಬುರಗಿಗೆ ವರ್ಗಾಯಿಸಬೇಕು ಹಾಗೂ ಕಲ್ಯಾಣ ಕರ್ನಾಟಕ ಭಾಗದವರನ್ನೇ ಸಮಿತಿ ಅಧ್ಯಕ್ಷರಾಗಿ ನೇಮಕ ಮಾಡಬೇಕು ಎಂದು ಒತ್ತಾಯಿಸಿದರು.