ETV Bharat / state

ಅನ್ಯ ಧರ್ಮೀಯರ ಬಳಿ ವ್ಯಾಪಾರ ಮಾಡದಂತೆ ಅಭಿಯಾನ ನಡೆಸಿದ ಹಿಂದೂ ರಕ್ಷಣಾ ವೇದಿಕೆ - ಅನ್ಯ ಧರ್ಮೀಯರ ಬಳಿ ವ್ಯಾಪಾರ ಮಾಡದಂತೆ ಜಾಗೃತಿ

ಮಹಿಳೆಯರಿಗೆ ಅರಿಶಿನ , ಕುಂಕುಮ, ಹೂವು ಕೊಟ್ಟು, ಬಳೆ ತೊಡಿಸಿ ಹಿಂದೂಯೇತರರ ಬಳಿ ವ್ಯಾಪಾರ ಮಾಡದಂತೆ ಹಿಂದೂ ರಕ್ಷಣಾ ವೇದಿಕೆ ಮಹಿಳಾ ಕಾರ್ಯಕರ್ತರು ಕಲಬುರಗಿಯಲ್ಲಿ ಅಭಿಯಾನ ನಡೆಸಿದರು.

ಹಿಂದೂ ರಕ್ಷಣಾ ವೇದಿಕೆಯಿಂದ ಜಾಗೃತಿ ಅಭಿಯಾನ
ಹಿಂದೂ ರಕ್ಷಣಾ ವೇದಿಕೆಯಿಂದ ಜಾಗೃತಿ ಅಭಿಯಾನ
author img

By

Published : Mar 25, 2022, 2:20 PM IST

Updated : Mar 25, 2022, 3:58 PM IST

ಕಲಬುರಗಿ: ಹಿಂದೂ ಜಾತ್ರೆಗಳಲ್ಲಿ ಹಿಂದೂಯೇತರ ವ್ಯಾಪಾರಸ್ಥರಿಗೆ ನಿಷೇಧ ಹೇರುವ ಕೂಗು ರಾಜ್ಯದೆಲ್ಲೆಡೆ ಜೋರಾಗುತ್ತಿದೆ. ಈ ಬೆನ್ನಲ್ಲೇ ಕಲಬುರಗಿಯಲ್ಲಿ ಹಿಂದೂ ಮಹಿಳೆಯರಿಂದ ನಗರದ ಪ್ರಸಿದ್ಧ ಶ್ರೀ ಶರಣ ಬಸವೇಶ್ವರರ ದೇವಸ್ಥಾನ ಆವರಣದಲ್ಲಿ ಅನ್ಯ ಧರ್ಮೀಯರ ಜೊತೆ ವ್ಯಾಪಾರ, ವಹಿವಾಟು ನಡೆಸದಂತೆ ಹಿಂದೂ ರಕ್ಷಣಾ ವೇದಿಕೆ ಮಹಿಳಾ ಕಾರ್ಯಕರ್ತರು ಅಭಿಯಾನ ನಡೆಸಿದರು.

ಹಿಂದೂಯೇತರರ ಬಳಿ ವ್ಯಾಪಾರ ಮಾಡದಂತೆ ಮಹಿಳಾ ಹಿಂದೂ ರಕ್ಷಣಾ ವೇದಿಕೆ ಸಂಘಟನೆಯ ನೇತೃತ್ವದಲ್ಲಿ ಮಹಿಳೆಯರು ವ್ಯಾಪಾರಸ್ಥರಿಗೆ ಮನವಿ ಮಾಡಿಕೊಂಡರು. ಈ ವೇಳೆ ಮಹಿಳೆಯರಿಗೆ ಅರಿಶಿನ, ಕುಂಕುಮ, ಹೂವು ಕೊಟ್ಟು, ಬಳೆ ತೊಡಿಸಿ ಹಿಂದೂ ಮಹಿಳಾ ಹೋರಾಟಗಾರರು ಮನವಿ ಮಾಡಿದರು.

ಹಿಂದೂ ರಕ್ಷಣಾ ವೇದಿಕೆಯಿಂದ ಜಾಗೃತಿ ಅಭಿಯಾನ

ಹಲವಾರು ವರ್ಷಗಳಿಂದ ನಮ್ಮ ಮೇಲೆ ವಿರೋಧಿಗಳು ದಬ್ಬಾಳಿಕೆ ಮಾಡುತ್ತಿದ್ದಾರೆ. ಹಿಂದೂ ವಿರೋಧಿಗಳ ಜೊತೆ ವ್ಯಾಪಾರ ಮಾಡದೇ, ಹಿಂದೂಗಳ ಜೊತೆ ವ್ಯಾಪಾರ ಮಾಡುವುದರಿಂದ ನಮ್ಮವರು ಆರ್ಥಿಕವಾಗಿ ಪ್ರಬಲರಾಗುತ್ತಾರೆ. ಈ ಕುರಿತು ಅರಿವು ಮೂಡಿಸಲಾಗುತ್ತಿದೆ ಎಂದು ಹಿಂದೂ ಹೋರಾಟಗಾರರಾದ ದಿವ್ಯಾ ಹಾಗರಗಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇದನ್ನೂ ಓದಿ: ಮುಂದಿನ ಚುನಾವಣೆಯೇ ನನ್ನ ಕೊನೆಯ ಚುನಾವಣೆ: ಸಿದ್ದರಾಮಯ್ಯ

Last Updated : Mar 25, 2022, 3:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.