ಕಲಬುರಗಿ: ಡಾ. ಉಮೇಶ್ ಜಾಧವ ಅವರ ಪುತ್ರ ಹಾಗೂ ಚಿಂಚೋಳಿ ಉಪ ಚುನಾವಣಾ ಕಣದ ಬಿಜೆಪಿ ಅಭ್ಯರ್ಥಿ ಡಾ. ಅವಿನಾಶ್ ಜಾಧವ್ ಬಿರುಸಿನ ಪ್ರಚಾರದ ನಡುವೆ ಇಂದು ಎಂಆರ್ಸಿಎಂ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಪರೀಕ್ಷೆ ಬರೆದರು. ಬೆಳಗ್ಗೆ 9 ಗಂಟೆಗೆ ಸರಿಯಾಗಿ ಪರೀಕ್ಷೆಗೆ ಹಾಜರಾಗಿದ್ದರು.
ಎಂಬಿಬಿಎಸ್ ಮುಗಿಸಿರುವ ಅವಿನಾಶ್ ಎಂಡಿ ಕಲಿಕೆಗಾಗಿ ಪರೀಕ್ಷೆ ಬರೆದಿದ್ದಾರೆ. ಚುನಾವಣೆ ಪ್ರಚಾರದ ಭರಾಟೆ ಮಧ್ಯೆ ತಮ್ಮ ವೃತ್ತಿ ಜೀವನದ ಬಗ್ಗೆ ಅವಿನಾಶ್ ಗಮನ ಹರಿಸಿದ್ದು ವಿಶೇಷವಾಗಿತ್ತು.