ಕಲಬುರಗಿ: ಅಕ್ರಮ ಮರಳು ಸಾಗಣೆ ತಡೆಯಲು ಮುಂದಾದ ಮುಖ್ಯ ಪೊಲೀಸ್ ಪೇದೆಯ ಕೊಲೆಗೆ ಯತ್ನಿಸಿದ ಘಟನೆ ಜಿಲ್ಲೆಯ ಚಿತ್ತಾಪುರದಲ್ಲಿ ನಡೆದಿದೆ.
![Attempted murder of cop in kalburgi](https://etvbharatimages.akamaized.net/etvbharat/prod-images/kn-klb-04-sand-mafiya-attempt-to-murder-7208086_07052020183844_0705f_1588856924_535.jpg)
ಚಿತ್ತಾಪುರ ಠಾಣಾ ವ್ಯಾಪ್ತಿಯ ಮರಗೋಳ ಗ್ರಾಮದಲ್ಲಿ ಮಂಗಳವಾರ ರಾತ್ರಿ ಗಸ್ತು ತಿರುಗುತ್ತಿದ್ದ ಮುಖ್ಯ ಪೊಲೀಸ್ ಪೇದೆ ದತ್ತಾತ್ರೇಯ ಎಂಬುವವರ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಆರೋಪಿ ಮುಂದಾಗಿದ್ದಾನೆ. ಚಾಲಕ ಜಗದೀಶ ಮುಡಬೂಳ ಹಾಗೂ ಮಾಲೀಕ ಯಲ್ಲಪ್ಪ ಕಾಟಂದೇವರಹಳ್ಳಿ ಎಂಬ ಆರೋಪಿಗಳನ್ನು ಬಂಧಿಸಿ, ಐಪಿಸಿ ಕಲಂ 307, 353, 279, 34ರ ಅನ್ವಯ ಪ್ರಕರಣ ದಾಖಲಿಸಲಾಗಿದೆ.
![Attempted murder of cop in kalburgi](https://etvbharatimages.akamaized.net/etvbharat/prod-images/kn-klb-04-sand-mafiya-attempt-to-murder-7208086_07052020183844_0705f_1588856924_900.jpg)
ಗಸ್ತು ತಿರುಗುತ್ತಿದ್ದ ಪೇದೆ ಎದುರು ಅಕ್ರಮವಾಗಿ ಮರಳು ತುಂಬಿದ್ದ ಟ್ರ‍್ಯಾಕ್ಟರ್ ಬಂದಿದೆ. ಅದನ್ನು ತಡೆಯಲು ಮುಂದಾದ ಪೇದೆ ಮೇಲೆ ಟ್ರ್ಯಾಕ್ಟರ್ ಹತ್ತಿಸಲು ಚಾಲಕ ಯತ್ನಿಸಿದ್ದಾನೆ ಎನ್ನಲಾಗಿದೆ. ಅದೃಷ್ಟವಶಾತ್ ಪೇದೆ ಪ್ರಾಣಾಪಾಯದಿಂದ ಪಾರಾಗಿದ್ದು, ಸಣ್ಣಪುಟ್ಟು ಗಾಯಗಳಾಗಿವೆ.
ಟ್ರ್ಯಾಕ್ಟರ್ ಕೆಳಗೆ ಸಿಲುಕಿದ ಬೈಕ್ ನಜ್ಜುಗುಜ್ಜಾಗಿದೆ. ಗಾಯಾಳು ಪೇದೆಯನ್ನು ಚಿತ್ತಾಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗೆ ಕಲಬುರಗಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಘಟನಾ ಸ್ಥಳಕ್ಕೆ ಸಿಪಿಐ ಪಂಚಾಕ್ಷರಿ ಸಾಲಿಮಠ, ಪಿಎಸ್‌ಐ ಶ್ರೀಶೈಲ್ ಹಾಗೂ ಸಿಬ್ಬಂದಿ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಚಿತ್ತಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.