ETV Bharat / state

ಪುಡಿ ರೌಡಿಗಳ ಅಟ್ಟಹಾಸ: ಕಲಬುರಗಿಯಲ್ಲಿ ಕಾಲೇಜು ವಿದ್ಯಾರ್ಥಿಯ ಬರ್ಬರ ಕೊಲೆ! - Another young man murder

ಪುಡಿ ರೌಡಿಗಳ ಅಟ್ಟಹಾಸದಿಂದ ಕಲಬುರಗಿಯಲ್ಲಿ ಕಾಲೇಜು ವಿದ್ಯಾರ್ಥಿಯ ಹೆಣ ಉರುಳಿದೆ. ಇದು ನಗರದ ನಿವಾಸಿಗಳ ನಿದ್ದೆಗೆಡಿಸಿದ್ದು ರೌಡಿಗಳನ್ನು ಮಟ್ಟ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

Another young man murder in Kalaburagi
ವಿರೇಶ್ ಕಡಗಂಚಿ (21) ಕೊಲೆಯಾದ ಯುವಕ
author img

By

Published : Aug 20, 2020, 7:21 PM IST

ಕಲಬುರಗಿ: ನಗರದಲ್ಲಿ ಹಾಡಹಗಲೇ ಮತ್ತೆ ಪುಡಿ ರೌಡಿಗಳು ಅಟ್ಟಹಾಸ ಮೆರೆದಿದ್ದಾರೆ. ಜನನಿಬಿಡ ಪ್ರದೇಶದಲ್ಲಿ ವಿದ್ಯಾರ್ಥಿವೋರ್ವನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಭೀಕರವಾಗಿ ಕೊಲೆಗೈದು ಪರಾರಿಯಾಗಿದ್ದಾರೆ.

ವಿರೇಶ್ ಕಡಗಂಚಿ (21) ಕೊಲೆಗೀಡಾಗಿರುವ ವಿದ್ಯಾರ್ಥಿ. ನಗರದ ಪಬ್ಲಿಕ್ ಗಾರ್ಡನ್ ಮುಂಭಾಗದಲ್ಲಿ ಜನನಿಬಿಡ ಪ್ರದೇಶದಲ್ಲಿ ತುಂತುರು ಮಳೆ ನಡುವೆಯೂ ಪುಡಿ ರೌಡಿಗಳು ವಿದ್ಯಾರ್ಥಿಗೆ ಚಾಕುದಿಂದ ಇರಿದಿದ್ದಾರೆ. ಪಲ್ಸರ್​ ಬೈಕ್​ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಏಕಾಏಕಿ ಯುವಕನ ತೊಡೆಗೆ ಚಾಕುವಿನಿಂದ ಇರಿದು ಕ್ಷಣಾರ್ಧದಲ್ಲಿ ಎಸ್ಕೇಪ್ ಆಗಿದ್ದಾರೆ.

ಗಂಭೀರವಾಗಿ ಗಾಯಗೊಂಡು ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ವಿರೇಶ್​ನನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಿಸದೇ ಆತ ಅಸುನೀಗಿದ್ದಾನೆ. ಕೊಲೆಯಾದ ವಿರೇಶ್​ ನಗರದ ಶರಣಬಸವೇಶ್ವರ ಪದವಿ ಕಾಲೇಜು ವಿದ್ಯಾರ್ಥಿಯಾಗಿದ್ದು, ರಾಣೇಶ್‌ಪೀರ್ ದರ್ಗಾ ಬಡಾವಣೆಯ ನಿವಾಸಿಯಾಗಿದ್ದಾನೆ.

ಖಾರದಪುಡಿ ಅಂಬು, ಭವನ್​​ ಕಾಳು, ದಾದು ಎಂಬುವರು ಕೃತ್ಯವೆಸಗಿರುವ ಶಂಕೆ ವ್ಯಕ್ತವಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸತೀಶ್​ ಕುಮಾರ ತಿಳಿಸಿದ್ದಾರೆ. ಸದ್ಯಕ್ಕೆ ಕೊಲೆಗೆ ಕಾರಣ ತಿಳಿದುಬಂದಿಲ್ಲ. ಈ ಕುರಿತು ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗಡುಕರ ಬಂಧನಕ್ಕೆ ಜಾಲ ಬೀಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.