ETV Bharat / state

ಕಲಬುರಗಿಯಲ್ಲಿ ಮತ್ತೊಬ್ಬ ಕೊರೊನಾ ಪೀಡಿತ ವ್ಯಕ್ತಿ ಗುಣಮುಖ: ಡಿಸಿ

ಕಲಬುರಗಿಯಲ್ಲಿ ಇಂದು ಮತ್ತೊಬ್ಬ ಕೊರೊನಾ ಪಿಡಿತ ವ್ಯಕ್ತಿ ಗುಣಮುಖನಾಗಿದ್ದಾನೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.

D C Sharath. B
ಜಿಲ್ಲಾಧಿಕಾರಿ ಶರತ್ ಬಿ
author img

By

Published : Apr 25, 2020, 10:33 PM IST

ಕಲಬುರಗಿ: ಜಿಲ್ಲೆಯಲ್ಲಿ ಮತ್ತೊಬ್ಬ ಕೊರೊನಾ ಪಿಡಿತ ವ್ಯಕ್ತಿ ಗುಣಮುಖನಾಗಿದ್ದು,‌ ಇಎಸ್ಐ ಆಸ್ಪತ್ರೆಯಿಂದ ಇಂದು ಡಿಸ್ಚಾರ್ಜ್ ಮಾಡಲಾಗಿದೆ.

ನಗರದ ಖಮರ್‌ ಕಾಲೊನಿ ನಿವಾಸಿ 57 ವರ್ಷದ ವ್ಯಕ್ತಿ (ರೋಗಿ ಸಂ-175) ಕೊರೊನಾ ಸೋಂಕಿನಿಂದ ಗುಣಮುಖರಾದ ಹಿನ್ನೆಲೆಯಲ್ಲಿ ಇಂದು ಅಸ್ಪತ್ರೆಯಿಂದ ಬಿಡುಗಡೆಗೊಳಿಸಿದೆ ಎಂದು ಜಿಲ್ಲಾಧಿಕಾರಿ ಶರತ್‌ ಬಿ. ತಿಳಿಸಿದ್ದಾರೆ. ಏಪ್ರಿಲ್ 7 ರಂದು ತೀವ್ರ ಉಸಿರಾಟದ ಸಮಸ್ಸೆ (SARI) ಹಿನ್ನೆಲೆ ತಪಾಸಣೆಗೆ ಒಳಪಡಿಸಿದಾಗ ಕೊರೊನಾ ಸೋಂಕು ದೃಢವಾಗಿತ್ತು. ಬಳಿಕ ನಿಗದಿತ ಅವಧಿಗೆ ಚಿಕಿತ್ಸೆ ನೀಡಿದಾಗ ಸದ್ಯ ಗುಣಮುಖರಾಗಿದ್ದಾರೆ‌ ಎಂದು ತಿಳಿದು ಬಂದಿದೆ.

ಒಟ್ಟಾರೆ ಜಿಲ್ಲೆಯಲ್ಲಿ ಪತ್ತೆಯಾದ 36 ಜನ ಕೊರೊನಾ ಪೀಡಿತರಲ್ಲಿ 4 ಜನ ಸಾವನ್ನಪ್ಪಿದ್ದು , 7 ಜನರು ಗುಣ ಮುಖರಾಗಿದ್ದಾರೆ. ಇನ್ನುಳಿದ 25 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಡಿ.ಸಿ. ಶರತ್ ಬಿ. ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.