ETV Bharat / state

ನಾನೂ ಕೂಡ ಸಚಿವಾಕಾಂಕ್ಷಿ, ರಾಜಭವನದಿಂದ ಕರೆ ಬರಬಹುದೆಂದು ಕಾಯುತ್ತಿರುವೆ : ಶಾಸಕ ತೆಲ್ಕೂರ - ರಾಜ್ಯ ಸಚಿವ ಸಂಪುಟ ವಿಸ್ತರಣೆ

ಮಂತ್ರಿ ಸ್ಥಾನ ಕಲಬುರಗಿಗೆ ಬೇಕು ಅನ್ನೋ ಕೂಗಿದೆ. ಈ ಬಾರಿ ಕಲಬುರಗಿಗೆ ಸಚಿವ ಸ್ಥಾನ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯ, ರಾಷ್ಟ್ರ ನಾಯಕರಿಗೆ ಮನವಿ ಮಾಡಿದ್ದೇವೆ..

Rajkumar Patil Telkur
ರಾಜಕುಮಾರ ಪಾಟೀಲ್ ತೆಲ್ಕೂರ
author img

By

Published : Jan 11, 2021, 6:46 PM IST

ಕಲಬುರಗಿ : ಸಚಿವ ಸಂಪುಟ ವಿಸ್ತರಣೆ ದಿನಾಂಕ ಫಿಕ್ಸ್ ಆಗುತ್ತಿದ್ದಂತೆ ಜಿಲ್ಲೆಗೆ ಸಚಿವ ಸ್ಥಾನ ನೀಡುವಂತೆ ಒತ್ತಡ ಕೇಳಿ ಬರುತ್ತಿದೆ. ಈ ನಡುವೆ ನಾನೂ ಕೂಡ ಸಚಿವಾಕಾಂಕ್ಷಿ ಇದ್ದೇನೆ ಎಂದು ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ ಹೇಳಿದ್ದಾರೆ.

ಶಾಸಕ ರಾಜಕುಮಾರ ಪಾಟೀಲ ತೆಲ್ಕೂರ

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಈ ಬಾರಿ ಸಚಿವ ಸಂಪುಟದಲ್ಲಿ ಅವಕಾಶ ಸಿಗಬಹುದು ಅನ್ನೋ ವಿಶ್ವಾಸ ಇದೆ. ನನಗೂ ರಾಜಭವನದಿಂದ ಕರೆ ಬರಬಹುದು ಎಂದು ಕಾಯ್ದು ಕುಳಿತಿದ್ದೇನೆ ಎಂದು ತೆಲ್ಕೂರ್ ಹೇಳಿದ್ದಾರೆ.

ಓದಿ...ಸಂಪುಟ ವಿಸ್ತರಣೆ ಬಗ್ಗೆ ನನಗೇನೂ ಗೊತ್ತಿಲ್ಲ; ಸಚಿವ ಸೋಮಣ್ಣ

ಮಂತ್ರಿ ಸ್ಥಾನ ಕಲಬುರಗಿಗೆ ಬೇಕು ಅನ್ನೋ ಕೂಗಿದೆ. ಈ ಬಾರಿ ಕಲಬುರಗಿಗೆ ಸಚಿವ ಸ್ಥಾನ ಕೊಡಿ ಎಂದು ಮುಖ್ಯಮಂತ್ರಿಗಳಿಗೆ ಮತ್ತು ರಾಜ್ಯ, ರಾಷ್ಟ್ರ ನಾಯಕರಿಗೆ ಮನವಿ ಮಾಡಿದ್ದೇವೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.