ಕಲಬುರಗಿ : ಹೈಕೋರ್ಟ್ ಆದೇಶದಂತೆ ರಾಜ್ಯದ ಎಲ್ಲಾ ಇಂದಿರಾ ಕ್ಯಾಂಟೀನ್ಗಳಲ್ಲಿ ಮೂರು ಹೊತ್ತು ಉಚಿತ ಊಟ, ಉಪಹಾರ ಕೊಡಲು ರಾಜ್ಯ ಸರ್ಕಾರ ಆರ್ಡರ್ ಮಾಡಿದೆ. ಆದರೆ, ಕಲಬುರಗಿಯ ಇಂದಿರಾ ಕ್ಯಾಂಟೀನ್ನಲ್ಲಿ 10 ರೂ. ಪಡೆಯಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಕೊಳೆಗೇರಿ ಪ್ರದೇಶದಲ್ಲಿ ವಾಸ ಮಾಡುತ್ತಿರುವವರು, ದಿನಗೂಲಿ ಮಾಡಿ ಜೀವನ ನಡೆಸುತ್ತಿದ್ದವರು, ವಲಸೆ ಕಾರ್ಮಿಕರು ಈ ಲಾಕ್‌ಡೌನ್ ಸಮಯದಲ್ಲಿ ಕೆಲಸವೂ ಇಲ್ಲದೆ, ಊಟವೂ ಇಲ್ಲದೆ ಪರದಾಡಬಾರದೆಂದು ಇಂದಿರಾ ಕ್ಯಾಂಟೀನ್ಗಳಲ್ಲಿ ಮೂರು ಹೊತ್ತು ಉಚಿತ ಊಟ, ಉಪಹಾರ ನೀಡಲು ಆದೇಶಿಸಲಾಗಿದೆ.
ಆದರೆ, ಕಲಬುರಗಿಯ ಹಲವು ಇಂದಿರಾ ಕ್ಯಾಂಟೀನ್ಗಳಲ್ಲಿ ಹಣ ಪಡೆದು ಊಟ ಕೊಡ್ತಿದ್ದಾರೆ ಎಂದು ಕಟ್ಟಡ ಕಾರ್ಮಿಕರು ಆರೋಪಿಸಿದ್ದಾರೆ. ಬಡವರಿಗೆ, ನಿರ್ಗತಿಕರಿಗೆ ಲಾಕ್‌ಡೌನ್ ಮುಗಿಯುವ ತನಕ ಉಚಿತ ಊಟ ನೀಡಬೇಕು ಎಂಬ ಆದೇಶವಿದೆ. ಆದರೆ, ಇಲ್ಲಿನ ಕ್ಯಾಂಟಿನ್ಗಳಲ್ಲಿ ಬಡವರ ಬಳಿ ಹಣ ಪಡೆಯುತ್ತಿದ್ದಾರೆ.
ಮೊದಲೇ ಕೆಲಸ ಇಲ್ಲದೆ ಮನೆಯಲ್ಲೇ ಇದ್ದೇವೆ. ಜೇಬಿನಲ್ಲಿ ನಯಾ ಪೈಸೆ ಇಲ್ಲ. ಹೊಟ್ಟೆ ಹಸಿದರೆ ಊಟ ಮಾಡೋದಕ್ಕೂ ಹಣವಿಲ್ಲ. ಹೈಕೋರ್ಟ್ ಆದೇಶದಂತೆ ಉಚಿತ ಆಹಾರ ಸಿಗುತ್ತೆ ಎಂದು ಖುಷಿಪಟ್ಟೆವು. ಆದರೆ, ಇಲ್ಲಿ ಸರ್ಕಾರದ ಆದೇಶಕ್ಕೂ ಕಿಮ್ಮತ್ತಿಲ್ಲ ಎಂದಿದ್ದಾರೆ.
ಓದಿ: ಮದ್ಯದ ಅಮಲಿನಲ್ಲಿ ಪೊಲೀಸರ ಮೇಲೆಯೇ ಕಾರು ಹತ್ತಿಸಲು ಯತ್ನಿಸಿದವನಿಗೆ ಬಿತ್ತು ಭಾರೀ ದಂಡ!