ETV Bharat / state

ಕಲಬುರಗಿ: ವಿಕೋಪಕ್ಕೆ ತಿರುಗಿದ ಜಗಳ.. ಅಳಿಯನಿಂದ ಅತ್ತೆಯ ಬರ್ಬರ ಕೊಲೆ ಆರೋಪ - kalburgi latest news

ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಿಂದ ಲಕ್ಷ್ಮಿಬಾಯಿ ಎಂಬುವರು ತನ್ನ ಮಗಳನ್ನು ಅಳಿಯನ ಮನೆಗೆ ಬಿಡಲು ಭೀಮನಾಳ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಮಗಳ ವಿಚಾರಕ್ಕೆ ಸಂಬಂಧಿಸಿದಂತೆ ಅತ್ತೆ ಮತ್ತು ಅಳಿಯನ ನಡುವೆ ಗಲಾಟೆಯಾಗಿದೆ. ಈ ವೇಳೆ ಅತ್ತೆಯ ತಲೆ ಮೇಲೆ ಅಳಿಯ ಸೈಜುಗಲ್ಲು ಹಾಕಿ ಬರ್ಬರ ಹತ್ಯೆ ಮಾಡಿರುವ ಆರೋಪ ಕೇಳಿಬಂದಿದೆ.

allegation as man murdered a mother-in-law; case registred
ಅಳಿಯನಿಂದ ಅತ್ತೆಯ ಬರ್ಬರ ಹತ್ಯೆ ಆರೋಪ; ಪ್ರಕರಣ ದಾಖಲು
author img

By

Published : Nov 4, 2020, 12:21 PM IST

ಕಲಬುರಗಿ: ಸ್ವಂತ ಅಳಿಯನೇ ತನ್ನ ಅತ್ತೆಯ ತಲೆ ಮೇಲೆ ಸೈಜುಗಲ್ಲು ಹಾಕಿ ಬರ್ಬರ ಹತ್ಯೆ ಮಾಡಿರುವ ಆರೋಪ ಪ್ರಕರಣ ಜಿಲ್ಲೆಯ ಕಮಲಾಪುರ ತಾಲೂಕಿನ ಭೀಮನಾಳ ಗ್ರಾಮದಲ್ಲಿ ನಡೆದಿದೆ.

ಲಕ್ಷ್ಮಿಬಾಯಿ (45) ಕೊಲೆಯಾದ ಮಹಿಳೆ. ಅಳಿಯ ರಾಮು ಎಂಬಾತ ಕೊಲೆಗೈದಿರುವ ಆರೋಪಿ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನಿಂದ ಲಕ್ಷ್ಮಿಬಾಯಿ ತನ್ನ ಮಗಳನ್ನು ಅಳಿಯನ ಮನೆಗೆ ಬಿಡಲು ಭೀಮನಾಳ ಗ್ರಾಮಕ್ಕೆ ಆಗಮಿಸಿದ್ದರು. ಈ ವೇಳೆ ಮಗಳ ವಿಚಾರಕ್ಕೆ ಸಂಬಂಧಿಸಿದಂತೆ ಅತ್ತೆ ಮತ್ತು ಅಳಿಯನ ನಡುವೆ ಗಲಾಟೆಯಾಗಿದೆ.

ಬಳಿಕ ಅತ್ತೆಯ ತಲೆ ಮೇಲೆ ಸೈಜುಗಲ್ಲು ಎತ್ತಿ ಹಾಕಿ ಅಳಿಯ ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಸದ್ಯ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ವಿಚಾರಣೆ ಕೈಗೊಂಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.