ಕಲಬುರಗಿ: ಕಲ್ಯಾಣ ಕರ್ನಾಟಕ ಪ್ರದೇಶದ ಅಭಿವೃದ್ದಿಗೆ ಸರ್ಕಾರದಿಂದ ಬಿಡುಗಡೆಯಾದ ಕೆಕೆಆರ್‌ಡಿಬಿ ಹಣದಲ್ಲಿ 85 ಲಕ್ಷ ಹಣ ವಿದೇಶ ಪ್ರವಾಸಕ್ಕೆ ಕೆಕೆಆರ್‌ಡಿಬಿ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ ಬಳಕೆ ಮಾಡಿದ್ದಾರೆ ಎಂದು ಮಾಜಿ ವಿಧಾನ ಪರಿಷತ್ ಸದಸ್ಯ ಅಲ್ಲಮಪ್ರಭು ಪಾಟೀಲ್ ಆರೋಪ ಮಾಡಿದ್ದಾರೆ.
ಇದೇ 06 ರಿಂದ 14 ರವರೆಗೆ ನೈದರ್ಲ್ಯಾಂಡ್, ಬೆಲ್ಜಿಯಂ, ಸ್ವಿಟ್ಜರ್ಲ್ಯಾಂಡ್ ಹೋಗಲು ಯೋಜನೆ ರೂಪಿಸಲಾಗಿತ್ತು. ತೋಟಗಾರಿಕೆ ಇಲಾಖೆ ಸಚಿವ ಮುನಿರತ್ನ, ಕೆಕೆಆರ್‌ಡಿಬಿ ಅಧ್ಯಕ್ಷ ರೇವೂರ, ವಿಶೇಷ ಕಾರ್ಯದರ್ಶಿಗಳು, ಓರ್ವ ಉದ್ಯಮಿ ಫಾರೀನ್ ಟ್ರಿಪ್ ಹೋಗುವವರಿದ್ದರು. ಇದಕ್ಕಾಗಿ ಟ್ರಾವೆಲ್ ಸಂಸ್ಥೆಗೆ 84 ಲಕ್ಷ 97 ಸಾವಿರ 736 ರೂ ಸಂದಾಯ ಮಾಡಲಾಗಿದೆ.
ಸದ್ಯ ಅನಾರೋಗ್ಯದ ಕಾರಣ ಪ್ರವಾಸ ತಾತ್ಕಾಲಿಕ ರದ್ದು ಮಾಡಲಾಗಿದೆ. ಮುಂದೆ ಹೋಗಬಹುದು. ಆದರೆ ಟ್ರಾವೆಲ್ ಸಂಸ್ಥೆಗೆ ಸಂದಾಯ ಮಾಡಲಾದ ಹಣ ವಾಪಸ್ ಪಡೆದಿಲ್ಲ. ವಿದೇಶ ಪ್ರವಾಸಕ್ಕೆ ರಾಜ್ಯ ಬಜೆಟ್ ಬಳಕೆ ಮಾಡಬೇಕಿತ್ತು. ಆದರೆ ಅಭಿವೃದ್ಧಿಗೆ ಮೀಸಲಾಗಿ ನೀಡುವ ಅನುದಾನ ಬಳಕೆ ಮಾಡಿರುವುದು ಸಮಂಜಸವಲ್ಲ ಎಂದು ಹೇಳಿದ್ದಾರೆ.
ಓದಿ: ಪಿಎಸ್ಐ ಪರೀಕ್ಷೆ ಹಗರಣದ ಆರೋಪಿಗೆ ಸನ್ಮಾನ.. ಕಲಬುರಗಿಯಲ್ಲಿ ತಾರಕಕ್ಕೇರಿದ ಮಾಜಿ, ಹಾಲಿ ಶಾಸಕರ ವಾಕ್ಸಮರ