ಕಲಬುರಗಿ: ಈಟಿವಿ ಭಾರತದ ವರದಿಗೆ ಸ್ಪಂದಿಸಿರುವ ಅಫಜಲಪುರ ಶಾಸಕ ಎಂ.ವೈ. ಪಾಟೀಲ, 2 ಕೋಟಿ 33 ಲಕ್ಷ ರೂ. ಅನುದಾನದಲ್ಲಿ ಅಫಜಲಪುರ ಪೊಲೀಸ್ ಠಾಣೆ ಕಟ್ಟಡ ನಿರ್ಮಾಣ ಕಾರ್ಯ ಆರಂಭಿಸುವುದಾಗಿ ಹೇಳಿದ್ದಾರೆ.
"ಅವನತಿ ಅಂಚಿನಲ್ಲಿ ಅಫಜಲಪುರ ಪೊಲೀಸ್ ಕ್ವಾಟರ್ಸ್: ಗೃಹ ಸಚಿವರೇ ಗಮನಿಸುವಿರಾ!!?" ಎಂಬ ಶೀರ್ಷಿಕೆಯಲ್ಲಿ ಅಫಜಲಪುರ ಪೊಲೀಸ್ ಠಾಣೆ ಹಾಗೂ ವಸತಿ ಗೃಹಗಳ ಶಿಥಿಲಾವಸ್ಥೆ ಬಗ್ಗೆ ಈಟಿವಿ ಭಾರತ ಬೆಳಕು ಚೆಲ್ಲಿತ್ತು.
ಓದಿ: ಅವನತಿ ಅಂಚಿನಲ್ಲಿ ಅಫಜಲಪುರ ಪೊಲೀಸ್ ಕ್ವಾಟರ್ಸ್: ಗೃಹ ಸಚಿವರೇ ಗಮನಿಸುವಿರಾ!!?
ಈ ವರದಿಗೆ ಸ್ಪಂದಿಸಿದ ಶಾಸಕ ಎಂ.ವೈ. ಪಾಟೀಲ, ಸಬ್ಇನ್ಸ್ಪೆಕ್ಟರ್, ಸರ್ಕಲ್ ಇನ್ಸ್ಪೆಕ್ಟರ್ ಕಚೇರಿ ಬಹಳ ಹಳೆಯದಾಗಿದ್ದು, ಕಟ್ಟಡ ನಿರ್ಮಾಣಕ್ಕೆ 2 ಕೋಟಿ 33 ಲಕ್ಷ ಅನುದಾನ ಬಿಡುಗಡೆಯಾಗಿದೆ. ತಕ್ಷಣ ಟೆಂಡರ್ ಕರೆದು ಕಾಮಗಾರಿ ಆರಂಭಿಸಲಾಗುವುದು. ಅದರಂತೆ 1 ಕೋಟಿ 60 ಲಕ್ಷ ವೆಚ್ಚದಲ್ಲಿ ಫರತಾಬಾದ ಠಾಣೆ ಕೂಡ ನಿರ್ಮಾಣ ಮಾಡಲಾಗುವುದು. ಅಫಜಲಪುರ ಪೊಲೀಸ್ ವಸತಿ ಗೃಹಗಳ ಬಗ್ಗೆ ಗಮನಕ್ಕೆ ಬಂದಿದ್ದು, ಶಿಥಿಲಗೊಂಡ ಕಟ್ಟಡಗಳನ್ನು ನೆಲಸಮಗೊಳಿಸಿ ಹೊಸ ಕಟ್ಟಡ ನಿರ್ಮಾಣಕ್ಕಾಗಿ ಪೊಲೀಸ್ ಇಲಾಖೆಗೆ, ಗೃಹ ಸಚಿವರಿಗೆ ಪತ್ರ ಬರೆದಿದ್ದೇನೆ. ಶೀಘ್ರವೇ ಅನುಮತಿ ಸಿಗುವ ನಿರೀಕ್ಷೆ ಇದೆ. ಬರುವ ಎರಡು ವರ್ಷದಲ್ಲಿ ಎಲ್ಲಾ ಕಾಮಗಾರಿ ಮುಗಿಸುವುದಾಗಿ ಭರವಸೆ ನೀಡಿದ್ದಾರೆ.