ETV Bharat / state

ಪೆಟ್ರೋಲ್ ಬಂಕ್ ಬಂದ್ ಆದೇಶ: ಕಲುಬುರಗಿಯಲ್ಲಿ ಬಂಕ್ ಮುಂದೆ ಜನಸಂದಣಿ

ಕೊರೊನಾ ಹರಡದಂತೆ ತಡೆಯಲು ಮುಂಜಾಗ್ರತೆವಹಿಸುವ ನಿಟ್ಟಿನಲ್ಲಿ ಕಲಬುರಗಿ ಜಿಲ್ಲಾಧಿಕಾರಿ ಪೆಟ್ರೋಲ್ ಬಂಕ್ ಬಂದ್ ಮಾಡುವ ಆದೇಶ ಹೊರಡಿಸಿದ ಕ್ಷಣದಲ್ಲೇ ಪೆಟ್ರೋಲ್ ಬಂಕ್​ಗಳತ್ತ ಜನಸ್ತೋಮವೇ ಹರಿದು ಬರುತ್ತಿದೆ.

After petrol
ಕೊರೊನಾ
author img

By

Published : Mar 28, 2020, 8:40 AM IST

ಕಲಬುರಗಿ: ಕೊರೊನಾ ಹರಡುವಿಕೆಯನ್ನು ತಡೆಯಲು ಕೇಂದ್ರ ಸರ್ಕಾರ ಸಂಪೂರ್ಣ ಲಾಕ್‌​​ಡೌನ್​ ಆದೇಶ ಜಾರಿ ಮಾಡಿದೆ. ಮನೆಯಿಂದ ಅನಗತ್ಯವಾಗಿ ಹೊರಬರದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಬೆನ್ನಲ್ಲೆ ಇಲ್ಲಿನ ಸೇಡಂನಲ್ಲಿ ಪೆಟ್ರೋಲ್ ಬಂಕ್ ಬಂದ್ ಮಾಡುವ ಆದೇಶ ನೀಡಿರುವ ಹಿನ್ನೆಲೆ ನಗರದ ಪೆಟ್ರೋಲ್ ಬಂಕ್​ಗಳಲ್ಲಿ ಜನಜಂಗುಳಿ ಏರ್ಪಟ್ಟಿತ್ತು.

ಪಟ್ಟಣದ ಪೆಟ್ರೋಲ್ ಬಂಕ್ ಸೇರಿದಂತೆ ತಾಲೂಕಿನ ಕೋಡ್ಲಾ, ಮಳಖೇಡ, ಮುಧೋಳ ಭಾಗಗಳಲ್ಲಿನ ಪೆಟ್ರೋಲ್ ಬಂಕ್‌ಗಳಿಗೆ ನೂರಾರು ದ್ವಿಚಕ್ರ ವಾಹನಗಳು ಮತ್ತು ಕಾರ್​​​ಗಳು ಆಗಮಿಸಿದ್ದವು. ಪೆಟ್ರೋಲ್​​​ಗಾಗಿ ನಾ ಮುಂದು ತಾ ಮುಂದು ಎನ್ನುವ ನೂಕುನುಗ್ಗಲು ಕಂಡುಬಂತು. ಇದರಿಂದ ಜನರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಡುವಂತಾಯ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.