ಕಲಬುರಗಿ: ಮರಳು ಸಾಗಣೆದಾರರಿಂದ ಹಣ ವಸೂಲಿ ಮಾಡುವ ವೇಳೆ ಮುಖ್ಯ ಪೇದೆ ಎಸಿಬಿ ಬಲೆಗೆ ಬಿದ್ದಿದ್ದಾರೆ.
ದೇವಲ ಗಾಣಗಾಪುರ ಪೊಲೀಸ್ ಠಾಣೆ ಮುಖ್ಯ ಪೆದೆಯಾಗಿರುವ ಕರೆಪ್ಪ ಎಸಿಬಿ ಬಲೆಗೆ ಬಿದ್ದವರು.ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ಕಲಬುರಗಿಯ ಹೈಕೋರ್ಟ್ ಬಳಿ ಮರಳು ಸಾಗಿಸುವ ಲಾರಿ ಚಾಲಕನಿಂದ 10 ಸಾವಿರ ರೂ. ಲಂಚ ಪಡೆಯುವಾಗ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದಾರೆ.
ಕರೆಪ್ಪ ಅವರನ್ನು ಎಸಿಬಿ ಅಧಿಕಾರಿಗಳು ವಶಕ್ಕೆ ಪಡೆದು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.