ETV Bharat / state

ಮಧ್ಯವರ್ತಿಯಾಗಿ ಹಣ ಕೊಡಿಸಿದ ತಪ್ಪಿಗೆ ತಾನೇ ಬಲಿಯಾದ ಯುವಕ - the sin of money mediating

ವೀರೇಶನನ್ನು ಬಲವಂತವಾಗಿ ಕರೆದುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಂತಕರು ವೀರೇಶನನ್ನು ಸಿಂದಗಿ ಗ್ರಾಮದ ಹೊರವಲಯಕ್ಕೆ ಕರೆದೊಯ್ದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ‌.

ಯುವಕ
ಯುವಕ
author img

By

Published : Feb 13, 2021, 8:21 PM IST

ಕಲಬುರಗಿ: ಕೊಟ್ಟ ಹಣ ಹಿಂದಿರುಗಿಸಿಲ್ಲವೆಂದು ಮಧ್ಯವರ್ತಿಯಾಗಿ ಹಣ ಕೊಡಿಸಿದ್ದ ಯುವಕನನ್ನು ಹತ್ಯೆಗೈದಿರುವ ಘಟನೆ ತಾಲೂಕಿನ ಸಿಂದಗಿ ಗ್ರಾಮದ ಹೊರವಲಯದಲ್ಲಿ ನಡೆದಿದೆ.

ನಗರದ ದುಬೈ ಕಾಲೋನಿ ನಿವಾಸಿ ವೀರೇಶ ಭೀಮಳ್ಳಿ (28) ಕೊಲೆಯಾದ ಯುವಕ. ಈತ ವ್ಯಕ್ತಿಯೊಬ್ಬನಿಗೆ ಮಧ್ಯವರ್ತಿಯಾಗಿ ಹಣ ಕೊಡಿಸಿದ್ದ. ಆದರೆ ಹಣ ಪಡೆದ ವ್ಯಕ್ತಿ ಮರಳಿ ಕೊಡದೆ ಸತಾಯಿಸುತ್ತಿದ್ದಕ್ಕೆ ಕಳೆದ ಬುಧವಾರ ಬೆಳಗ್ಗೆ ವೀರೇಶನನ್ನು ಮೂರು ಜನ ಕರೆದುಕೊಂಡು ಹೋಗಿದ್ದಾರೆ.

ಮಧ್ಯವರ್ತಿಯಾಗಿ ಹಣ ಕೊಡಿಸಿ ಕೊಲೆಯಾದ ಯುವಕ

ಇದಕ್ಕೆ ಪುಷ್ಟಿ ನೀಡುವಂತೆ ವೀರೇಶನನ್ನು ಬಲವಂತವಾಗಿ ಕರೆದುಕೊಂಡು ಹೋಗಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಹಂತಕರು ವೀರೇಶನನ್ನು ಸಿಂದಗಿ ಗ್ರಾಮದ ಹೊರವಲಯಕ್ಕೆ ಕರೆದೊಯ್ದು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ‌. ಬುಧವಾರ ಬೆಳಗ್ಗೆ ಅಂಗಡಿಗೆ ಹೋಗಿ ನಾಪತ್ತೆಯಾಗಿದ್ದ ವೀರೇಶ ಮನೆಗೆ ವಾಪಸ್​​ ಬಾರದ ಹಿನ್ನೆಲೆ, ಪೋಷಕರು ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಯಾರಿಗೋ ಹಣ ಕೊಡಿಸಿ ಇದೀಗ ವೀರೇಶ ಶವವಾಗಿ ಪತ್ತೆಯಾಗಿದ್ದು ಪೋಷಕರ ಆಕ್ರಂದನ ಮುಗಿಲುಮುಟ್ಟಿದೆ. ಪ್ರಕರಣ ದಾಖಲಿಸಿಕೊಂಡಿರುವ ಗ್ರಾಮೀಣ ಪೊಲೀಸರು, ಆರೋಪಿಗಳನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.