ETV Bharat / state

ಅಕ್ರಮ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಮನೆಯಲ್ಲೇ ಯುವಕ ಶವವಾಗಿ ಪತ್ತೆ.. ಕೊಲೆ ಶಂಕೆ - ಮೃತನ ತಾಯಿ ಮಲ್ಲಮ್ಮ

ಅನೈತಿಕ ಸಂಬಂಧ ಇಟ್ಟುಕೊಂಡಿದ್ದ ಮಹಿಳೆ ಮನೆಯಲ್ಲೇ ಯುವಕ ಅನುಮಾನಾಸ್ಪದ ಸಾವು- ಪೊಲೀಸರಿಂದ ತನಿಖೆ - ಕಲಬುರಗಿ ಜಿಲ್ಲೆಯಲ್ಲಿ ಪ್ರಕರಣ

dead young man
ಅನುಮಾನಸ್ಪದ ಸಾವಿಗೀಡಾದ ಯುವಕ ಶಿವಶರಣಪ್ಪ
author img

By

Published : Mar 12, 2023, 5:41 PM IST

Updated : Mar 12, 2023, 11:04 PM IST

ಯುವಕ ಅನುಮಾನಾಸ್ಪದ ಸಾವು

ಕಲಬುರಗಿ: ಪಕ್ಕದ ಮನೆಯ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಯುವಕನು ಮಹಿಳೆಯ ಮನೆಯಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಅಫಜಲಪುರ ತಾಲೂಕಿನ ಚಿಂಚೋಳಿ ಗ್ರಾಮದಲ್ಲಿ ನಡೆದಿದೆ. ಅನೈತಿಕ ಸಂಬಂಧದ ಹಿನ್ನೆಲೆ ಆತನನ್ನು ಕೊಲೆ ಮಾಡಲಾಗಿದೆ ಎಂದು ಯುವಕನ ಮನೆಯವರು ಆರೋಪ ಮಾಡಿದ್ದಾರೆ.

ಗ್ರಾಮದ ಶಿವಶರಣಪ್ಪ ಜಮಾದಾರ್ (28) ಸಾವಿಗೀಡಾದ ಯುವಕ. ಕ್ರೂಸರ್ ಚಾಲಕನಾಗಿದ್ದ ಶಿವಶರಣಪ್ಪಗೆ ಮದುವೆ ಆಗಿರಲಿಲ್ಲ. ಆದ್ರೆ ಪಕ್ಕದ ಮನೆ ಮಹಿಳೆ ಜತೆಗೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದ. ಆಕೆಯೇ ನನ್ನ ಮಗನನ್ನು ಫೋನ್​ ಮಾಡಿ ಕರೆಸಿಕೊಂಡಿದ್ದಳು ಎಂದು ಮೃತ ಯುವಕನ ತಾಯಿ ಹೇಳಿದ್ದಾರೆ.

ಇಬ್ಬರು ಮೊಬೈಲ್ ನಲ್ಲಿ ಮಾತಾಡೋದು ಕದ್ದುಮುಚ್ಚು ಭೇಟಿ ಆಗೋದು ಮಾಡ್ತಿದ್ರು, ಈ ವಿಷಯ 15 ದಿನಗಳ ಹಿಂದೆ ಮಹಿಳೆಯ ಮನೆಯಲ್ಲಿ ಗೊತ್ತಾಗಿ ಶಿವಶರಣಪ್ಪನನ್ನ ಹೊಲಕ್ಕೆ ಕರೆದೊಯ್ದು ಥಳಿಸಿದ್ದರು. ಬಳಿಕ ನಮ್ಮ ಮನೆಯ ಹೆಣ್ಣು ಮಗಳದ್ದು ತಪ್ಪಿದೆ, ಅವನಿಗೆ ಏನು ಮಾಡೋದು ಅಂತ ಸುಮ್ಮನೆ ಬಿಟ್ಟಿದ್ದರಂತೆ. ಅವರ ತಾಯಿಯ ಎದುರು ಆತನಿಗೆ ಬು್ಧಿ ಕಲಿಸುವುದಕ್ಕಾಗಿ ಎರಡು ಪೆಟ್ಟು ಹೊಡೆದಿದ್ದೆವು ಅಷ್ಟೇ ಅಂತ ಹೇಳಿಕೊಂಡಿದ್ದರು ಎಂದು ಯುವಕನ ತಾಯಿ ತಿಳಿಸಿದ್ದಾರೆ.

ಶನಿವಾರ ರಾತ್ರಿ ಊಟ ಮುಗಿಸಿ ನಮ್ಮ ಟೆರೆಸ್ ಮೇಲೆ ಮಲಗಿದ್ದ. ಆದ್ರೆ, ತಡರಾತ್ರಿ ಅವರ ಪಕ್ಕದ ಮನೆಯಲ್ಲಿ ಶವವಾಗಿ ಪತ್ತೆಯಾಗಿದ್ದಾನೆ. ನಿನ್ನ ಮಗ ಕುಡಿದು ನಮ್ಮ ಮನೆಯಲ್ಲಿ ಮಲಗಿದ್ದಾನೆ ನೋಡು ಬಾ ಎಂದು ಪಕ್ಕದ ಮನೆಯ ವ್ಯಕ್ತಿ ನನ್ನ ಮತ್ತು ನನ್ನ ಪತಿಯನ್ನು ಕರೆದುಕೊಂಡು ಹೋಗಿದ್ದನು. ನಾವು ಹೋಗಿ ನೋಡುವಷ್ಟರಲ್ಲಿ ಆತ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ. ತಕ್ಷಣ ಆಸ್ಪತ್ರೆಗೆ ಕರೆದೊಯ್ದಾಗ ನಮ್ಮ ಮಗ ಮೃತಪಟ್ಟಿರೋದು ದೃಢಪಟ್ಟಿದೆ ಎಂದು ಮೃತನ ತಾಯಿ ಮಲ್ಲಮ್ಮ ಘಟನೆ ಬಗ್ಗೆ ವಿವರಿಸಿದ್ದಾರೆ.

ಶಿವಶರಣಪ್ಪನ ಸಾವು ಸಹಜವಾದ ಸಾವಲ್ಲ, ಮಾರಕಾಸ್ತ್ರಗಳಿಂದ ಹೊಡೆದಿಲ್ಲ, ಆದರೆ ಮೈಮೇಲೆ ಹಲ್ಲೆ ಗುರುತು ಆಗದಂತೆ ಪಕ್ಕಾ ಪ್ಲಾನ್ ಮಾಡಿ ಕೈಯಿಂದ ಹೊಡೆದು ಪಕ್ಕದ ಮನೆಯವರೇ ನನ್ನ ಮಗನನ್ನು ಕೊಲೆ ಮಾಡಿದ್ದಾರೆ. ಮಹಿಳೆಯ ಸೋದರ ಮಾವ ಅವನನ್ನು ಏನಾದರೂ ಮಾಡಿ ಮುಗಿಸಬೇಕೆಂದು ಅಂದುಕೊಂಡಿದ್ದರು ಎಂದು ಮಲ್ಲಮ್ಮ ಆರೋಪಿಸಿದ್ದಾರೆ.

ಮನೆ ಮೇಲೆ ಮಲಗಿದವನು ಅವರ ಮನೆಗೆ ಹೇಗೆ ಹೋಗ್ತಾನೆ. ಅವರೇ ಯಾರಿಗೂ ತಿಳಿಯದಂತೆ ಆತನನ್ನು ಕರೆದೊಯ್ದು ಕೊಲೆ ಮಾಡಿದ್ದಾರೆ. ಬಳಿಕ ಏನು ಗೊತ್ತಿಲ್ಲದವರಂತೆ ನಾಟಕ ಮಾಡ್ತಿದ್ದಾರೆ ಎಂದು ಯುವಕನ ತಾಯಿ ಮಲ್ಲಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮನೆಗೆ ಆಧಾರಸ್ತಂಭವಾಗಿದ್ದ ಮಗನನ್ನು ಕಳೆದುಕೊಂಡ ಶಿವಶರಣಪ್ಪನ ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ಯುವಕನ ಸಾವಿನ ಸುತ್ತ ಹಲವು ಅನುಮಾನಗಳು ವ್ಯಕ್ತವಾಗಿವೆ. ಸಹಜವಾದ ಸಾವಲ್ಲ ಅದೊಂದು ಕೊಲೆ ಎಂದು ಆತನ ತಾಯಿ ಆರೋಪ ಮಾಡಿದ್ದು, ಅಫಜಲಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಸದ್ಯ ಸ್ಥಳಕ್ಕೆ ಅಫಜಲಪುರ ಠಾಣೆ ಪೊಲೀಸರು ಭೇಟಿ ನೀಡಿ ಪರೀಶೀಲನೆ ಮಾಡಿದ್ದು, ತನಿಖೆ ಪ್ರಾರಂಭಿಸಿದ್ದಾರೆ. ಪೊಲೀಸರ ತನಿಖೆ ನಂತರವಷ್ಟೇ ಕೊಲೆ ಹಿಂದಿನ ರಹಸ್ಯ ಗೊತ್ತಾಗಲಿದೆ.

ಇದನ್ನೂಓದಿ:ಗುಡಿಸಲಿಗೆ ಬೆಂಕಿ: ಸುಖ ನಿದ್ರೆಯಲ್ಲಿದ್ದ ಮೂವರು ಮಕ್ಕಳು, ದಂಪತಿ ದಾರುಣ ಸಾವು

Last Updated : Mar 12, 2023, 11:04 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.