ETV Bharat / state

ಮಹಿಳೆಯ ಶವ ಬಿಟ್ಟು ಕದಲದ ಕೋತಿ: ಮಂಗನ ವಿಚಿತ್ರ ವರ್ತನೆಗೆ ಗಾಬರಿಗೊಂಡ ಗ್ರಾಮಸ್ಥರು - ಕಲಬುರಗಿ ಕೋತಿ ನ್ಯೂಸ್​

ಕಲಬುರಗಿ ಜಿಲ್ಲೆಯ ಮಾಲಗತ್ತಿ ಗ್ರಾಮದಲ್ಲಿ ಮಹಿಳೆಯ ಶವದ ಮುಂದೆ ಮಂಗವೊಂದು ಸುಮಾರು 20 ಗಂಟೆಗಳ ಕಾಲ ಕದಲದೇ ಕುಳಿತುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿರುವ ಘಟನೆ ನಡೆದಿದೆ.

ಮಹಿಳೆಯ ಶವ ಮಹಿಳೆಯ ಶವದ ಪಕ್ಕದಲ್ಲಿ ಕುಳಿತ ಕೋತಿಬಿಟ್ಟು ಕದಲದ ಕೋತಿ
ಮಹಿಳೆಯ ಶವದ ಪಕ್ಕದಲ್ಲಿ ಕುಳಿತ ಕೋತಿ
author img

By

Published : Jun 23, 2022, 12:17 PM IST

Updated : Jun 23, 2022, 2:52 PM IST

ಕಲಬುರಗಿ: ನಮ್ಮ ಪ್ರೀತಿಪಾತ್ರರು ಅಗಲಿದಾಗ ಉಂಟಾಗುವ ದುಃಖ ಭರಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ವಿಷಯದಲ್ಲಿ ಮಾನವರು ಮಾತ್ರವಲ್ಲದೇ ಪ್ರಾಣಿಗಳೂ ಕೂಡ ಮೂಕವೇದನೆ ಅನುಭವಿಸುವುದು ಸಹಜ. ಆದರೆ, ಕಲಬುರಗಿ ಜಿಲ್ಲೆಯ ಮಾಲಗತ್ತಿ ಗ್ರಾಮದಲ್ಲಿ ಮಹಿಳೆಯ ಶವದ ಮುಂದೆ ಮಂಗವೊಂದು ಸುಮಾರು 20 ಗಂಟೆಗಳ ಕಾಲ ಕದಲದೇ ಕುಳಿತುಕೊಳ್ಳುವ ಮೂಲಕ ಅಚ್ಚರಿ ಮೂಡಿಸಿರುವ ಘಟನೆ ನಡೆದಿದೆ.

ಸಾಮಾನ್ಯವಾಗಿ ಜನರ ಗದ್ದಲದ ನಡುವೆ ಕೋತಿಗಳು ಇರೋದಿಲ್ಲ. ಆದರೆ, ಈ ಮಂಗ ಮಾತ್ರ ಶವದ ಮುಂದೆ ಕಣ್ಣೀರು ಹಾಕುತ್ತ ಕುಳಿತವರ ಮಧ್ಯೆ ತಾನೂ ಸಹ ಕುಳಿತು ಶೋಕದಲ್ಲಿ ಮುಳುಗುವ ಮೂಲಕ ವಿಚಿತ್ರ ವರ್ತನೆ ತೋರಿದೆ.

ಮಹಿಳೆಯ ಶವದ ಪಕ್ಕದಲ್ಲಿ ಕುಳಿತ ಕೋತಿ

ನಿನ್ನೆ ಮಧ್ಯಾಹ್ನ ಮಾಲಗತ್ತಿ ಗ್ರಾಮದ ಶಾಮಲಾ ಎಂಬುವರು ಕಾಯಿಲೆಯಿಂದ ಮೃತಪಟ್ಟಿದ್ದರು. ಮನೆಯಲ್ಲಿ ಶಾಮಲಾ ಅವರ ಶವವಿಟ್ಟು ಸಂಬಂಧಿಕರು ಅಳುತ್ತ ಕುಳಿತಿದ್ದರು. ಮಹಿಳೆ ಮೃತಪಟ್ಟ ಒಂದು ಗಂಟೆಗೆ ಪ್ರತ್ಯಕ್ಷವಾದ ಕೋತಿ ಸ್ಥಳಬಿಟ್ಟು ಕದಲದೇ ಜನರ ಮಧ್ಯೆ ತಾನೂ ಕೂಡ ಕುಳಿತಿತ್ತು. ಕೋತಿ ಓಡಿಸೋದಕ್ಕೆ ಎಷ್ಟೇ ಪ್ರಯತ್ನಪಟ್ಟರೂ ಸಹ ಮಂಗ ಮಾತ್ರ ಆ ಜಾಗದಿಂದ ಕದಲೇ ಇಲ್ಲ.

ಅಂತ್ಯಸಂಸ್ಕಾರದ ವಿಧಿವಿಧಾನಕ್ಕೂ ಅಡ್ಡಿಪಡಿಸಿದ ಕೋತಿ, ಶವಕ್ಕೆ ಮುಂದಿನ ಕಾರ್ಯ ನಡೆಸಲು ಬಿಡಲಿಲ್ಲ. ಇದರಿಂದ ಭಯಭೀತರಾದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಸಿಬ್ಬಂದಿ ಕೋತಿಗೆ ಅರವಳಿಕೆ ಚುಚ್ಚು ಮದ್ದು ನೀಡಿ ಕರೆದೊಯ್ದಿದ್ದಾರೆ. ಇದೇ ಮೊದಲ ಬಾರಿ ಕೋತಿ ಕಾಣಿಸಿಕೊಂಡು ವಿಚಿತ್ರ ವರ್ತನೆ ತೋರಿರುವುದು ಗ್ರಾಮಸ್ಥರ ಆತಂಕಕ್ಕೆ ಕಾರಣವಾಗಿದೆ.

ಇದನ್ನೂ ಓದಿ: ತಾಯಿ, ಮಗು ಎರಡಕ್ಕೂ ಗಾಯ; ಮರಿಯನ್ನು ಎದೆಗವಚಿ ಕ್ಲಿನಿಕ್‌ ಮುಂದೆ ಕುಳಿತ ಕೋತಿ

Last Updated : Jun 23, 2022, 2:52 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.