ಕಲಬುರಗಿ: ತನ್ನ ಮದುವೆ ಆಮಂತ್ರಣ ಪತ್ರದಲ್ಲಿ ಕನ್ನಡ ಭಾಷೆಯ ರಕ್ಷಣೆಯ ಬೇಡಿಕೆಗಳನ್ನು ಈಡೇಸುವಂತೆ ಮುದ್ರಿಸಿ ಇಲ್ಲೊಬ್ಬ ವ್ಯಕ್ತಿ ವಿಶೇಷವಾಗಿ ಮನವಿ ಮಾಡಿ ಗಮನ ಸೆಳೆದಿದ್ದಾರೆ.
ಕನ್ನಡಿಗರ ಮೇಲಿನ ಹಿಂದಿ ಹೇರಿಕೆ ನಿಲ್ಲಲಿ, ಕರ್ನಾಟಕದಲ್ಲಿನ ಉದ್ಯೋಗಗಳು ಕನ್ನಡದ ಮಕ್ಕಳಿಗೆ ಸಿಗಲಿ, ಭಾಷಾ ಸಮಾನತೆ ಜಾರಿಗೆ ಬರಲಿ.. ಎಂದು ಮದುವೆಯ ಆಮಂತ್ರಣ ಪತ್ರದಲ್ಲಿ ಯುವಕ ಪ್ರಿಂಟ್ ಹಾಕಿಸಿದ್ದಾರೆ.
ಅಫ್ಜಲ್ಪುರ ತಾಲೂಕಿನ ಬಂದರವಾಡ ಗ್ರಾಮದ ನಿವಾಸಿ, ಕರ್ನಾಟಕ ರಕ್ಷಣಾ ವೇದಿಕೆ ಟಿ ಎ ನಾರಾಯಣ ಗೌಡ ಬಣದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿರುವ ರಾಜೇಂದ್ರ ಕುಮಾರ ಹೀಗೊಂದು ವಿಶೇಷ ಪ್ರಯತ್ನ ಮಾಡಿದ್ದಾರೆ.
ಇದರ ಜೊತೆಗೆ ಲಗ್ನ ಪತ್ರಿಕೆಯಲ್ಲಿ ಕುವೆಂಪು ರಚಿತ 'ಕನ್ನಡವಿಲ್ಲದ ಸರ್ವ ನನಗದು ನರಕಕ್ಕೆ ಸಮಾನ, ಕನ್ನಡವಿರುವ ನರಕ ನನಗದು ಸ್ವರ್ಗಕ್ಕೆ ಸಮಾನ ಹಾಗೂ ಮಕ್ಕಳು ಕನ್ನಡ ತಾಯಿ ಭಾಷೆಯಲ್ಲಿ ಓದಲಿ ಎಂಬೆಲ್ಲಾ ಭಾಷಾಭಿಮಾನ ನುಡಿಗಳನ್ನು ನಮೂದಿಸಲಾಗಿದೆ.