ETV Bharat / state

ವಿದ್ಯುತ್ ಸರ್ವಿಸ್ ವೈರ್ ತಗುಲಿ ಯುವಕ ಸಾವು

ವಿದ್ಯುತ್ ಕಂಬವೇರಿ ದುರಸ್ತಿ ಮಾಡುವಾಗ ವಿದ್ಯುತ್​ ಹರಿದು ಯುವಕ ಸಾವನ್ನಪ್ಪಿರುವ ಘಟನೆ ಕಲಬುರಗಿ ಜಿಲ್ಲೆ ಚಿತ್ತಾಪುರ ತಾಲೂಕು ವ್ಯಾಪ್ತಿಯಲ್ಲಿ ನಡೆದಿದೆ.

a man died due to current shock
ವಿದ್ಯುತ್ ಸರ್ವಿಸ್ ವೈಯರ್ ತಗುಲಿ ಯುವಕ ಸಾವು
author img

By

Published : Apr 5, 2020, 6:45 PM IST

ಕಲಬುರಗಿ: ವಿದ್ಯುತ್ ಕಂಬವೇರಿ ದುರಸ್ತಿ ಮಾಡುವಾಗ ಸರ್ವಿಸ್ ವೈಯರ್ ತಗುಲಿ ಯುವಕ ದುರ್ಮರಣ ಹೊಂದಿರುವ ಘಟನೆ ಚಿತ್ತಾಪುರ ತಾಲೂಕಿನ ಹಲಕರ್ಟಿ ಗ್ರಾಮದಲ್ಲಿ ನಡೆದಿದೆ.

ವಿದ್ಯುತ್ ಸರ್ವಿಸ್ ವೈಯರ್ ತಗುಲಿ ಯುವಕ ಸಾವು

ಮಂಜುನಾಥ ರಾವೂರಕರ್ (26) ಅವಘಡದಲ್ಲಿ ಮೃತಪಟ್ಟ ಯುವಕ ಎಂದು ಗುರುತಿಸಲಾಗಿದೆ. ಐಟಿಐ ವ್ಯಾಸಂಗ ಮಾಡಿದ ಮಂಜುನಾಥ, ಗ್ರಾಮದಲ್ಲಿ ಮನೆ ಮತ್ತು ಅಂಗಡಿಗಳ ಚಿಕ್ಕಪುಟ್ಟ ವಿದ್ಯುತ್ ಸಮಸ್ಯೆ ದುರಸ್ತಿ ಕೆಲಸಗಳನ್ನು ಮಾಡಿಕೊಂಡು ಜೀವನ ನಡೆಸುತ್ತಿದ್ದ. ಮನೆಯೊಂದರ ವೈಯರ್ ಸಡಿಲಾದ ಕಾರಣ ದುರಸ್ತಿ ಮಾಡಲು ಪ್ಯೂಸ್ ತೆಗೆದು ಸರ್ವಿಸ್ ಕಂಬ್ ಹತ್ತಿದ್ದನಂತೆ, ಈ ವೇಳೆ ಇನ್ನೊಂದು ಸರ್ವಿಸ್ ವೈರನಲ್ಲಿ ವಿದ್ಯುತ್ ಹರಿದ ಪರಿಣಾಮ ಯುವಕ ಶೇ. 80 ರಷ್ಟು ಸುಟ್ಟು ಗಾಯಗಳಾಗಿವೆ.

ತಕ್ಷಣ ಸ್ಥಳಿಯ ಆಸ್ಪತ್ರೆಗೆ ದಾಖಲಿಸಿದರು ಚಿಕಿತ್ಸೆ ಫಲಿಸದೆ ಕೊನೆಯುಸಿರೆಳೆದಿದ್ದಾನೆ. ಮೃತ ಮಂಜುನಾಥ್​​ಗೆ​ ಒಂದು ವರ್ಷದ ಹಿಂದಷ್ಟೆ ಮದುವೆಯಾಗಿತ್ತು. ಕುಟುಂಬಸ್ಥರ ಅಕ್ರಂದನ ಮುಗಿಲು ಮುಟ್ಟಿದೆ. ವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.