ಸೇಡಂ: ಕಣ್ಣ ಮುಂದೆಯೇ ಮೀನುಗಾರನೋರ್ವ ನದಿಯಲ್ಲಿ ಕೊಚ್ಚಿ ಹೋದ ಘಟನೆ, ತಾಲೂಕಿನ ಕುಕ್ಕುಂದಾ ಗ್ರಾಮದ ಕಾಗಿಣಾ ನದಿಯಲ್ಲಿ ಜರುಗಿದೆ. ಕೊಚ್ಚಿ ಹೋದ ದೃಶ್ಯ ಮೊಬೈಲ್ನಲ್ಲಿ ಸೆರೆಯಾಗಿದೆ.
ಮೀನು ಹಿಡಿಯಲು ಹೋದ ವೇಳೆ ನದಿಯಲ್ಲಿ ನೀರಿನ ರಭಸ ಹೆಚ್ಚಾದ ಪರಿಣಾಮ ಘಟನೆ ಜರುಗಿದೆ ಎನ್ನಲಾಗಿದ್ದು, ಮೀನುಗಾರ ಈಜಿ ದಡ ಸೇರುವ ಪ್ರಯತ್ನ ಮಾಡಿದ್ದಾನಾದರೂ ಪ್ರಯತ್ನ ಫಲಿಸಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ಇತರೆ ಮೀನುಗಾರರ ಸಹಾಯದೊಂದಿಗೆ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳಕ್ಕೆ ಪಿಎಸ್‌ಐ ಸುಶೀಲಕುಮಾರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.