ಸೇಡಂ (ಕಲಬುರಗಿ): ಪಟ್ಟಣದ ಪ್ರಮುಖ ಉದ್ಯಮಿಯೋರ್ವರು ಇಂದು ಬೆಳಿಗ್ಗೆ ನಿಗೂಢವಾಗಿ ಕಣ್ಮರೆಯಾಗಿದ್ದು, ಕುಟುಂಬ ವಲಯದಲ್ಲಿ ಆತಂಕ ಮನೆಮಾಡಿದೆ.
ತಾಲೂಕಿನ ಶ್ಯಾಮರಾವ ಊಡಗಿ (55) ಎಂಬ ಉದ್ಯಮಿ ಇಂದು ಬೆಳಿಗ್ಗೆಯಿಂದ ಕಣ್ಮರೆಯಾಗಿದ್ದು, ಬಿಬ್ಬಳ್ಳಿ ಗ್ರಾಮದಲ್ಲಿ ಹರಿಯುವ ನದಿಯ ಪಕ್ಕದಲ್ಲಿ ಶ್ಯಾಮರಾವ್ಗೆ ಸೇರಿದ ಬೈಕ್ ಮತ್ತು ಚಪ್ಪಲಿ ದೊರೆತಿವೆ. ಈ ಆಧಾರದ ಮೇಲೆ ನದಿಯಲ್ಲಿ ಮೀನುಗಾರರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ನೆರವಿನೊಂದಿಗೆ ಪೊಲೀಸರು ಶೋಧ ಕಾರ್ಯ ಕೈಗೊಂಡಿದ್ದಾರೆ.
ಇಂದು ಬೆಳಿಗ್ಗೆಯಿಂದಲೇ ನದಿಯಲ್ಲಿ ಉದ್ಯಮಿಯ ಪತ್ತೆ ಕಾರ್ಯ ನಡೆದಿದ್ದು, ಮಳಖೇಡ ಪಿಎಸ್ಐ ಶಿವಶಂಕರ ಸಾಹು, ಸೇಡಂ ಪಿಎಸ್ಐ ಸುಶೀಲಕುಮಾರ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ.