ಕಲಬುರಗಿ: ಮಹಾರಾಷ್ಟ್ರದ ನಂಜು ರಾಜ್ಯಕ್ಕೆ ದಿನೇ ದಿನೆ ಹೆಚ್ಚುತ್ತಲೇ ಇದೆ. ಇಂದು ಒಂದೇ ದಿನ 61 ಕೊರೊನಾ ಪ್ರಕರಣಗಳು ಧೃಡಪಟ್ಟಿರುವುದು ಜಿಲ್ಲೆಯ ಜನರಲ್ಲಿ ತೀವ್ರ ಆತಂಕ ಸೃಷ್ಟಿಸಿದೆ.
ಇಂದು ಬೆಳಗಿನ ಹೆಲ್ತ್ ಬುಲೆಟಿನ್ನಲ್ಲಿ ನಾಲ್ವರು ಮಕ್ಕಳು, ಐವರು ಮಹಿಳೆಯರು ಮತ್ತು ಆರು ಜನ ಪುರುಷರು ಸೇರಿ ಒಟ್ಟು 15 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಸಂಜೆ ಮತ್ತೆ 46 ಜನರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದ್ದು, ಇದರೊಂದಿಗೆ ಸೋಂಕಿತರ ಸಂಖ್ಯೆ 251ಕ್ಕೆ ಏರಿಕೆಯಾಗಿದೆ.
ಮಹಾರಾಷ್ಟ್ರದಿಂದ ವಾಪಸ್ಸಾದ ವಲಸೆ ಕಾರ್ಮಿಕರಲ್ಲಿಯೇ ಈವರೆಗೆ ಹೆಚ್ಚು ಕೋವಿಡ್-19 ರೋಗ ಕಾಣಿಸಿಕೊಂಡಿದ್ದು, ಇನಷ್ಟು ವರದಿಗಳು ಬರುವುದು ಬಾಕಿ ಇರುವ ಕಾರಣ ಸೋಂಕಿತರ ಸಂಖ್ಯೆ ಹೆಚ್ಚುವ ಸಾಧ್ಯತೆ ಇದೆ.