ETV Bharat / entertainment

'ಜನುಮದ ಜೋಡಿ' ಬಿಡುಗಡೆಯಾಗಿದ್ದ ದಿನವೇ ಶಿವಣ್ಣನ 'ಭೈರತಿ ರಣಗಲ್' ರಿಲೀಸ್ - BHAIRATHI RANAGAL MOVIE

ಬಿಡುಗಡೆ ಹೊಸ್ತಿಲಿನಲ್ಲಿರುವ 'ಭೈರತಿ ರಣಗಲ್' ಚಿತ್ರದ ಪ್ರೀ ರಿಲೀಸ್ ಈವೆಂಟ್ ಹೊಸಕೆರೆಹಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ಅದ್ಧೂರಿಯಾಗಿ ಜರುಗಿತು.

'Bhairathi Ranagal' Pre Release Event
'ಭೈರತಿ ರಣಗಲ್' ಪ್ರೀ ರಿಲೀಸ್ ಈವೆಂಟ್ (Photo: ETV Bharat)
author img

By ETV Bharat Entertainment Team

Published : Nov 11, 2024, 5:01 PM IST

'ಭೈರತಿ ರಣಗಲ್', ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ಚಿತ್ರ. 'ಘೋಸ್ಟ್' ಚಿತ್ರದ ಯಶಸ್ಸಿನ ಬಳಿಕ ಹ್ಯಾಟ್ರಿಕ್ ಹೀರೋ 'ಭೈರತಿ ರಣಗಲ್' ಆಗಿ ಕಾಣಿಸಿಕೊಂಡಿರುವ ಹೈವೋಲ್ಟೇಜ್ ಚಿತ್ರ. ಮೇಕಿಂಗ್ ಜೊತೆಗೆ ಟೀಸರ್, ಟ್ರೇಲರ್​​ ಮೂಲಕ ಸಿನಿಪ್ರಿಯರ ನಿರೀಕ್ಷೆ ಹೆಚ್ಚಿಸಿರುವ ಕರುನಾಡ ಚಕ್ರವರ್ತಿ ಮುಖ್ಯಭೂಮಿಕೆಯ 'ಭೈರತಿ ರಣಗಲ್' ಬಿಡುಗಡೆ ಹೊಸ್ತಿಲಿನಲ್ಲಿದೆ. ಟ್ರೇಲರ್​​ನಿಂದಲೇ ಸಾಕಷ್ಟು ಸದ್ದು ಮಾಡಿರುವ ಈ ಚಿತ್ರದ ಪ್ರೀ ರಿಲೀಸ್ ಈವೆಂಟ್ ಹೊಸಕೆರೆಹಳ್ಳಿಯ ನಂದಿ ಲಿಂಕ್ಸ್ ಗ್ರೌಂಡ್​ನಲ್ಲಿ ಅದ್ಧೂರಿಯಾಗಿ ಜರುಗಿತು.

ಒಂದು ಇಂಟ್ರೆಸ್ಟಿಂಗ್ ವಿಷ್ಯ ಏನಂದ್ರೆ 1996ರಲ್ಲಿ ಶಿವರಾಜ್​ಕುಮಾರ್​​ ಅಭಿನಯದ ಸೂಪರ್ ಹಿಟ್ ಚಿತ್ರ 'ಜನುಮದ ಜೋಡಿ' ಕೂಡಾ ನವೆಂಬರ್ 15 ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗಿತ್ತು. ಇದೀಗ ಭೈರತಿ ರಣಗಲ್ ಚಿತ್ರ ಕೂಡ ಅದೇ ದಿನ ಅದೇ ಚಿತ್ರಮಂದಿರದಲ್ಲಿ ಬಿಡುಗಡೆ ಆಗುತ್ತಿರುವುದು ವಿಶೇಷ.

ಭೈರತಿ ರಣಗಲ್ ಪ್ರೀ ರಿಲೀಸ್ ಈವೆಂಟ್​ನಲ್ಲಿ ಡಾಲಿ ಧನಂಜಯ್​, ನೀನಾಸಂ ಸತೀಶ್, ವಿಜಯ ರಾಘವೇಂದ್ರ, ಸುಧಾರಾಣಿ, ಶೃತಿ, ರಕ್ಷಿತಾ ಪ್ರೇಮ್, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎನ್.ಎಂ ಸುರೇಶ್, ಮಾಜಿ‌ ಅಧ್ಯಕ್ಷ ಸಾ. ರಾ ಗೋವಿಂದು, ನಿರ್ಮಾಪಕ ಸೂರಪ್ಪ ಬಾಬು, ಕೆ.ಪಿ. ಶ್ರೀಕಾಂತ್, ನಿರ್ದೇಶಕ ಬಹದ್ದೂರ್ ಚೇತನ್, ಪವನ್ ಒಡೆಯರ್ ಸೇರಿದಂತೆ ಕನ್ನಡ ಚಿತ್ರರಂಗದ ಗಣ್ಯರು ಕಾಣಿಸಿಕೊಂಡರು. ತಮ್ಮ ಪ್ರೀತಿಪೂರ್ವಕ ಮಾತುಗಳಿಂದ ಭೈರತಿ ರಣಗಲ್ ದೊಡ್ಡ ಮಟ್ಟದ ಯಶಸ್ಸು ಕಾಣಲಿ ಎಂದು ಹಾರೈಸಿದರು‌.

'Bhairathi Ranagal' Pre Release Event
'ಭೈರತಿ ರಣಗಲ್' ಪ್ರೀ ರಿಲೀಸ್ ಈವೆಂಟ್ (Photo: ETV Bharat)

ಕಾರ್ಯಕ್ರಮದಲ್ಲಿ ಮಾತನಾಡಿದ ನಾಯಕ ನಟ ಶಿವರಾಜ್​​​ಕುಮಾರ್, ''ಮಫ್ತಿ ಚಿತ್ರದ ಭೈರತಿ ರಣಗಲ್ ಪಾತ್ರವನ್ನು ನೀವು ಮೆಚ್ಚಿ ಯಶಸ್ವಿಗೊಳಿಸಿದ್ದೀರಿ. ಮಫ್ತಿಯ ಪ್ರೀಕ್ವೆಲ್​​​ ಈ ಭೈರತಿ ರಣಗಲ್. ನಿರ್ದೇಶಕ ನರ್ತನ್ ತುಂಬಾ ಒಳ್ಳೆಯ ಕಥೆ ಮಾಡಿಕೊಂಡಿದ್ದರು. ಅಷ್ಟೇ ಚೆನ್ನಾಗಿ ನಿರ್ದೇಶನ ಮಾಡಿದ್ದಾರೆ. ಭೈರತಿ ರಣಗಲ್ ಅಭಿಮಾನಿಗಳ ಹೃದಯಕ್ಕೆ ಹತ್ತಿರವಾಗುತ್ತಾನೆ. ನಮ್ಮ ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ನಿರ್ಮಿಸಿರುವ ಎರಡನೇ ಚಿತ್ರವಿದು. ಅನುಭವಿ ತಂತ್ರಜ್ಞರ ಹಾಗೂ ಕಲಾವಿದರ ಸಮಾಗಮದಲ್ಲಿ ಈ ಚಿತ್ರ ಉತ್ತಮವಾಗಿ ಮೂಡಿಬಂದಿದೆ. 28 ವರ್ಷಗಳ ಹಿಂದೆ ನವೆಂಬರ್ 15ರಂದೇ ನನ್ನ ಜನುಮದ ಜೋಡಿ ಚಿತ್ರ ನರ್ತಕಿ ಥಿಯೇಟರ್​ನಲ್ಲಿ ಬಿಡುಗಡೆಯಾಗಿತ್ತು. ಸಿನಿಮಾಗೆ ನಾಗಾಭರಣ ಆ್ಯಕ್ಷನ್​ ಕಟ್​ ಹೇಳಿದ್ದರು. ಈ ಸಿನಿಮಾ ಕೂಡಾ ನವೆಂಬರ್ 15ರಂದು ನರ್ತಕಿ ಚಿತ್ರಮಂದಿರದಲ್ಲೇ ಬಿಡುಗಡೆಯಾಗುತ್ತಿದೆ. ಆ ಚಿತ್ರದ ನಿರ್ಮಾಪಕರು ನನ್ನ ಅಮ್ಮ. ಈ ಚಿತ್ರದ ನಿರ್ಮಾಪಕರು ನನ್ನ ಹೆಂಡತಿ'' ಎಂದು ತಿಳಿಸಿದರು.

ನಿರ್ದೇಶಕ ನರ್ತನ್ ಮಾತನಾಡಿ, ಈ ಭೈರತಿ ರಣಗಲ್ ಸಿನಿಮಾ ಮಾಡಲು ಕಾರಣ ಶಿವಣ್ಣ ಮತ್ತು ಮಫ್ತಿ. ಈ ವೇದಿಕೆಯಲ್ಲಿ ಎಲ್ಲಿ ನೋಡಿದ್ರೂ ಶಿವಣ್ಣನೇ ಕಾಣ್ತಾರೆ. ಶಿವಣ್ಣನ ಕಣ್ಣಲ್ಲಿ ಒಂದು ಪವರ್ ಇದೆ. ಕರ್ನಾಟಕಕ್ಕೆ ಮಾತ್ರವಲ್ಲ, ಇಂಡಿಯಾಗೆ ಒಂದು ಪವರ್ ಕೊಡಬಹುದು. ಅಷ್ಟು ಪವರ್ ಇದೆ. ಈ ಸಿನಿಮಾವಾಗಲು ಶಿವಣ್ಣನನೇ ಕಾರಣ. ಶಿವಣ್ಣನ ಎದೆಯಲ್ಲಿರುವ ಅಭಿಮಾನಿಗಳು ನೀವೇ ನಮ್ಮ ಶ್ರಮಕ್ಕೆ ಪ್ರತಿಫಲ ಕೊಡಬೇಕು ಎಂದು ಕೋರಿದರು.

ಇದನ್ನೂ ಓದಿ: ರಾಕಿಂಗ್​ ಸ್ಟಾರ್​ ಯಶ್​ ರಾಧಿಕಾ ಪುತ್ರನ ಗ್ರ್ಯಾಂಡ್​​ ಬರ್ತ್​ಡೇ ಸೆಲೆಬ್ರೇಶನ್​: ವಿಡಿಯೋ ನೋಡಿ

ಈ ಸಿನಿಮಾದಲ್ಲಿ ಕರುನಾಡ ಚಕ್ರವರ್ತಿ ಎರಡು ಶೇಡ್​ಗಳಲ್ಲಿ ಕಾಣಿಸಿಕೊಂಡಿಳ್ಳುತ್ತಿದ್ದಾರೆ. ರುಕ್ಮಿಣಿ ವಸಂತ್​​ ಜೋಡಿಯಾಗಿದ್ದಾರೆ. ಇವರ ಜೊತೆ ಛಾಯಾಸಿಂಗ್, ಅವಿನಾಶ್, ಬಾಬು ಹಿರಣ್ಣಯ್ಯ, ಗೋಪಾಲಕೃಷ್ಣ ದೇಶಪಾಂಡೆ, ಮಧು ಗುರುಸ್ವಾಮಿ, ಡ್ಯಾನ್ಸಿಂಗ್ ರೋಸ್ ಶಬೀರ್, ಪ್ರತಾಪ್ ಮುಂತಾದ ಕಲಾವಿದರು ಅಭಿನಯಿಸಿದ್ದಾರೆ.

ಇದನ್ನೂ ಓದಿ: Watch: ಮುಂಬೈನಲ್ಲಿ ಯಶ್​​ - ಕಿಯಾರಾ ಅಡ್ವಾಣಿ; 'ಟಾಕ್ಸಿಕ್'​​​ಗೆ ಬಾಲಿವುಡ್​ ನಟಿ?

ಗೀತಾ ಪಿಕ್ಚರ್ಸ್ ಲಾಂಛನದಲ್ಲಿ ಗೀತಾ ಶಿವರಾಜಕುಮಾರ್ ಅದ್ಧೂರಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದು, ರವಿ ಬಸ್ರೂರ್ ಸಂಗೀತ, ನವೀನ್ ಕುಮಾರ್ ಕ್ಯಾಮರಾ ವರ್ಕ್, ಗುಣ ಕಲಾ ನಿರ್ದೇಶನ, ದಿಲೀಪ್ ಸುಬ್ರಹ್ಮಣ್ಯ ಹಾಗೂ ಚೇತನ್ ಡಿಸೋಜಾ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ‌. ಟ್ರೈಲರ್​ನಿಂದಲೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಹವಾ ಕ್ರಿಯೇಟ್ ಮಾಡಿರುವ ಭೈರತಿ ರಣಗಲ್ ಇದೇ ನವೆಂಬರ್ 15ಕ್ಕೆ ಪ್ರೇಕ್ಷಕರಿಗೆ ದರ್ಶನ ಕೊಡಲಿದ್ದಾನೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.