ಸೇಡಂ: ಕೊರೊನಾ ಸೋಂಕಿನಿಂದ ಸೇಡಂ ತಾಲೂಕಿನ ಗೋಪನಪಲ್ಲಿ ಗ್ರಾಮದ 50 ವರ್ಷದ ಪುರುಷ (P-7907) ಮೃತಪಟ್ಡಿದ್ದು, ಗುರುವಾರ ವೈದ್ಯಕೀಯ ವರದಿಯಿಂದ ಸೋಂಕು ಇರುವುದು ದೃಢವಾಗಿದೆ. ಈ ಮೂಲಕ ಕೊರೊನಾ ಸೋಂಕಿಗೆ ಜಿಲ್ಲೆಯಲ್ಲಿ ಮೃತರಾದವರ ಸಂಖ್ಯೆ 11ಕ್ಕೆ ಏರಿಕೆಯಾಗಿದೆ ಎಂದು ಜಿಲ್ಲಾಧಿಕಾರಿ ಶರತ್ ಬಿ. ತಿಳಿಸಿದ್ದಾರೆ.
ತೀವ್ರ ಉಸಿರಾಟ ತೊಂದರೆ ಹಿನ್ನೆಲೆಯಲ್ಲಿ ಇವರು ಕಳೆದ ಜೂನ್ 13 ರಂದು ಕಲಬುರಗಿ ಜಿಮ್ಸ್ ಆಸ್ಪತ್ರೆಗೆ ದಾಖಲಾಗಿ ಜೂನ್ 15ಕ್ಕೆ ನಿಧನ ಹೊಂದಿದ್ದಾರೆ.
ಇವರ ಕೋವಿಡ್-19 ಪರೀಕ್ಷೆಯ ವೈದ್ಯಕೀಯ ವರದಿ ಇಂದು ಬಂದಿದ್ದು, ಸೋಂಕು ತಗಲಿರುವುದು ಖಚಿತವಾಗಿದೆ ಎಂದು ಡಿಸಿ ತಿಳಿಸಿದರು.