ಕಲಬುರಗಿ : ಜಿಲ್ಲೆಯಲ್ಲಿಂದು ಐವರು ಕೊರೊನಾ ವೈರಸ್ನಿಂದ ಸಾವನಪ್ಪಿದ್ದಾರೆ. ಸೋಂಕಿತರ ಹೊಡೆತ ಕಡಿಮೆಯಾಗುವ ಲಕ್ಷಣ ಕಾಣುತ್ತಿಲ್ಲ. ಇದಲ್ಲದೆ ಇಂದು ಹೊಸ 159 ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 3,529ಕ್ಕೆ ಏರಿಕೆಯಾಗಿದೆ.
ಇನ್ನು, ಇಂದು ಮೃತಪಟ್ಟವರಲ್ಲಿ ನಾಲ್ವರು ಪುರುಷರು ಹಾಗೂ ಓರ್ವ ಮಹಿಳೆ ಸೇರಿದ್ದಾಳೆ. ಕ್ರಮವಾಗಿ 57 ವರ್ಷ, 73, 37, 70 ವರ್ಷದ ಪುರುಷರು ಸೇರಿ, 40 ವರ್ಷದ ಓರ್ವ ಮಹಿಳೆ ಸಾವನಪ್ಪಿದ್ದಾಳೆ.
ಈ ನಡುವೆ ಇಂದು 26 ಮಂದಿ ಕೊರೊನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನು, ಜಿಲ್ಲೆಯಲ್ಲಿ 1,554 ಸಕ್ರಿಯ ಪ್ರಕರಣಗಳಿವೆ.