ETV Bharat / state

ಕಲಬುರಗಿಯಲ್ಲಿ 9 ತಿಂಗಳ ಮಗು ಸೇರಿ ಇಂದು 34 ಜನರಲ್ಲಿ ಕೊರೊನಾ ದೃಢ​ - ಕಲಬುರಗಿ ಲೆಟೆಸ್ಟ್​ ಕೊರೊನಾ ಅಪ್​ಡೇಟ್​

ಕಲಬುರಗಿಯಲ್ಲಿ ಇಂದು 34 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 1160ಕ್ಕೆ ಏರಿಕೆಯಾಗಿದೆ.

Kalburgi
ಕಲಬುರಗಿ: 9 ತಿಂಗಳ ಮಗು ಸೇರಿ 34 ಜನರಲ್ಲಿ ಕೊರೊನಾ ಪಾಸಿಟಿವ್​
author img

By

Published : Jun 20, 2020, 7:42 PM IST

ಕಲಬುರಗಿ: ಜಿಲ್ಲೆಯಲ್ಲಿ ಇಂದು 34 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ.

9 ತಿಂಗಳ ಮಗು ಸೇರಿ 7 ಮಕ್ಕಳು, 14 ಮಹಿಳೆಯರು ಹಾಗೂ 13 ಮಂದಿ ಪುರುಷರಲ್ಲಿ ಸೋಂಕು ಪತ್ತೆಯಾಗಿದೆ. ಈ ಪೈಕಿ ಇಬ್ಬರ ಟ್ರಾವೆಲ್ ಹಿಸ್ಟರಿ ಪತ್ತೆಯಾಗಿಲ್ಲ. 5 ಜನರಿಗೆ ಸೋಂಕಿತರ ಸಂಪರ್ಕದಿಂದ ಸೋಂಕು ತಗುಲಿದೆ. ಒಬ್ಬರು ಬೆಂಗಳೂರು, ಮತ್ತೊಬ್ಬರು ಯಾದಗಿರಿಯಿಂದ ವಾಪಸಾಗಿದ್ದವರಾಗಿದ್ದಾರೆ. ಉಳಿದವರು ಮಹಾರಾಷ್ಟ್ರದಿಂದ ವಾಪಸಾದ ವಲಸಿಗರು ಎಂದು ತಿಳಿದು ಬಂದಿದೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 1160ಕ್ಕೆ ಏರಿಕೆಯಾಗಿದ್ದು, ಇಂದು 42 ಜನರು ಗುಣಮಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಮಕ್ಕಳಲ್ಲಿ ಹೆಚ್ಚುತ್ತಿರುವ ಸೋಂಕು: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ಮಕ್ಕಳಲ್ಲಿಯೇ ಹೆಚ್ಚು ಸೊಂಕು ಕಂಡು ಬರುತ್ತಿದೆ. ನಿನ್ನೆ 6 ತಿಂಗಳ ಹಸುಗೂಸಿಗೂ ಕೊರೊನಾ ಸೋಂಕು ದೃಢಪಟ್ಟಿದ್ದು, ಇಂದು ಮತ್ತೆ 9 ತಿಂಗಳ ಮಗುವಿನಲ್ಲಿ ಸೋಂಕು ಕಾಣಿಸಿಕೊಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.