ETV Bharat / state

ಕಾಳಗಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸೋಂಕಿನ ಹಿಂದೆ ಮುಂಬೈ ನಂಟು : ಆತಂಕ ಹುಟ್ಟಿಸಿದ ಮಾಹಿತಿ

author img

By

Published : Mar 7, 2021, 2:05 PM IST

ಕಾಳಗಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ.ರಾಜಶೇಖರ ಮಾಲಿ ಮಾಹಿತಿ ನೀಡಿದ್ದಾರೆ. ಮುಂಬೈನಿಂದ ಆಗಮಿಸಿದವರ ಸಂಪರ್ಕದಿಂದ ಸೋಂಕು ಬಂದಿದೆ ಎಂದು ಅವರು ಹೇಳಿದ್ದಾರೆ.

ಕಾಳಗಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳ ಸೋಂಕಿನ ಹಿಂದೆ ಮುಂಬೈ ನಂಟು
15 students of Kalari school infected with corona

ಕಲಬುರಗಿ: ದೇಶದಲ್ಲೇ ಮಹಾಮಾರಿ‌ ಕೊರೊನಾಗೆ ಮೊದಲ ಬಲಿಯಾದ ಕಲಬುರಗಿ ಜಿಲ್ಲೆಯಲ್ಲಿ ಸದ್ಯ ಕೊರೊನಾ ಹತೋಟಿಗೆ ಬರುತ್ತಿರುವಾಗಲೇ ಮತ್ತೆ ಕೋವಿಡ್​​ನ ಎರಡನೇ ಅಲೆ ಶುರುವಾಗಿದೆ. ಒಂದೇ ಶಾಲೆಯ 15 ಮಕ್ಕಳಿಗೆ ಡೆಡ್ಲಿ ವೈರಸ್ ಅಟ್ಯಾಕ್ ಆಗಿದ್ದು, ಇವರಿಗೆ ಮುಂಬೈ‌ ನಂಟು ಇರುವುದು ತೀವ್ರ ಆತಂಕಕ್ಕೆ ಎಡೆಮಾಡಿಕೊಟ್ಟಿದೆ.

ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿ ಡಾ.ರಾಜಶೇಖರ ಮಾಲಿ

ಜಿಲ್ಲೆಯ ಕಾಳಗಿ ಪಟ್ಟಣದ ಸರ್ಕಾರಿ ಪ್ರೌಢ ಶಾಲೆಯ 9 ಮತ್ತು 10ನೇ ತರಗತಿಯ 15 ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು ತಗುಲಿದೆ. ಈ ಹಿನ್ನೆಲೆಯಲ್ಲಿ ಶಾಲೆಯನ್ನು ಸೀಲ್ ಡೌನ್ ಮಾಡಿ ಒಂದು ವಾರ ರಜೆ ಘೋಷಿಸಲಾಗಿದೆ.

ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿ ಮಾ.01 ರಂದು 63 ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ಮಾಡಲಾಗಿದ್ದು, 22 ವಿದ್ಯಾರ್ಥಿಗಳ ವರದಿ ಬಂದಿದೆ. ಅದರಲ್ಲಿ 15 ವಿದ್ಯಾರ್ಥಿಗಳಿಗೆ ಕೋವಿಡ್ ದೃಢಪಟ್ಟಿದೆ. ಪಾಸಿಟಿವ್ ಬಂದ ಮಕ್ಕಳ ಟ್ರಾವೆಲ್ ಹಿಸ್ಟರಿ ಪರಿಶೀಲಿಸಿದಾಗ ಫೆ.26ರಂದು ಬೇಡಸೂರ ತಾಂಡ ಮತ್ತು ಫೆ.18ರಂದು ನಾಮುತಾಂಡದಲ್ಲಿ ನಡೆದ ಮದುವೆ ಸಮಾರಂಭದಲ್ಲಿ ಈ ಶಾಲೆಯ ಇಬ್ಬರು ಮಕ್ಕಳು ಭಾಗವಹಿಸಿದ್ದರು. ಈ ಸಮಾರಂಭಕ್ಕೆ ಮುಂಬೈನ ಜನರು ಪಾಲ್ಗೊಂಡಿದ್ದರು. ಇದರಿಂದ ಕೋವಿಡ್ ಹರಡಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ರಾಜಶೇಖರ ಮಾಲಿ ಹೇಳಿದ್ದಾರೆ.

ಓದಿ: ಕಾಳಗಿ ಸರ್ಕಾರಿ ಶಾಲೆ ವಿದ್ಯಾರ್ಥಿಗಳಲ್ಲಿ ಕೊರೊನಾ ಪತ್ತೆ ಪ್ರಕರಣ: ಶಿಕ್ಷಕರು ಸೇರಿ 172 ಜನರಿಗೆ ಬಿಗ್​ ರಿಲೀಫ್​​

ಕೋವಿಡ್ ಪಾಸಿಟಿವ್ ಬಂದ 15 ವಿದ್ಯಾರ್ಥಿಗಳ ಟ್ರಾವೆಲ್ ಹಿಸ್ಟರಿ ಸಂಗ್ರಹಿಸಿ ಮನೆಯ ಸದಸ್ಯರಿಗೆ ಹಾಗೂ ಸಂಪರ್ಕಿತರಿಗೂ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ. 41 ವಿದ್ಯಾರ್ಥಿಗಳ ವರದಿಗಳು ಬಾಕಿ ಇವೆ. ಪಾಸಿಟಿವ್ ಬಂದಿರುವ 15 ವಿದ್ಯಾರ್ಥಿಗಳನ್ನು ಹೋಂ ಐಸೋಲೇಷನ್ ಮಾಡಲಾಗಿದ್ದು, ಶಾಲೆಯನ್ನು ಸಂಪೂರ್ಣ ಸ್ಯಾನಿಟೈಸರ್ ಮಾಡಿ ಒಂದು ವಾರದವರೆಗೆ ಸೀಲ್​​ಡೌನ್ ಮಾಡಿ ಕಾಳಗಿ ತಾಲೂಕು ಆಡಳಿತ ಘೋಷಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.