ETV Bharat / state

ಹೊಸ ವರ್ಷಾಚರಣೆ: ಕಲಬುರಗಿಯಲ್ಲಿ ನಿಷೇಧಾಜ್ಞೆ ಜಾರಿ

ರೂಪಾಂತರ ಕೊರೊನಾ ವೈರಸ್ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಕಲಬುರಗಿಯಲ್ಲಿ ಕಲಂ 144 ಅನ್ವಯ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್ ಆದೇಶ ಹೊರಡಿಸಿದ್ದಾರೆ.

kalburagi
ಪೊಲೀಸ್ ಆಯುಕ್ತ ಎನ್. ಸತೀಶ್ ಕುಮಾರ್
author img

By

Published : Dec 31, 2020, 11:49 AM IST

ಕಲಬುರಗಿ: ಹೊಸ ವರ್ಷಾಚರಣೆಗೆ ನಗರದಾದ್ಯಂತ ನಿಷೇಧಾಜ್ಞೆ ಜಾರಿಗೊಳಿಸಿ ಕಲಬುರಗಿ ನಗರ ಪೊಲೀಸ್ ಆಯುಕ್ತ ಎನ್.ಸತೀಶ್ ಕುಮಾರ್ ಆದೇಶಿಸಿದ್ದಾರೆ.

ರೂಪಾಂತರ ಕೊರೊನಾ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ನಗರದಾದ್ಯಂತ ಇಂದು ರಾತ್ರಿ (ಡಿಸೆಂಬರ್ 31ರ 10.30 ರಿಂದ) ನಾಳೆ ಬೆಳಗ್ಗೆ (ಜನವರಿ 1 ರಂದು ಬೆಳಗ್ಗೆ 6.30 ರವರೆಗೆ) ನಿಷೇಧ ಜಾರಿಯಲ್ಲಿರಲಿದೆ. ಈ ವೇಳೆ ಸಾರ್ವಜನಿಕ ಸ್ಥಳಗಳಲ್ಲಿ ಹೊಸ ವರ್ಷಾಚರಣೆ ನಿಷೇಧಿಸಲಾಗಿದೆ. ನಿಯಮದ ಪ್ರಕಾರ, ಐದಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ. ಪಬ್, ಬಾರ್, ರೆಸ್ಟೋರೆಂಟ್​ಗಳನ್ನು ನಿಗದಿಪಡಿಸಿದ ಸಮಯಕ್ಕೆ ಬಂದ್​ ಮಾಡಬೇಕು. ಡಿಜೆ ಸೌಂಡ್ ಸಿಸ್ಟಮ್ ಅ​ನ್ನು ಸಂಪೂರ್ಣ ನಿಷೇಧಿಸಲಾಗಿದೆ.

ಓದಿ: ಹೊಸ ವರ್ಷಾಚರಣೆಗೆ ನಿರ್ಬಂಧ: ಕಾರ್ಯಕ್ರಮ ಆಯೋಜಕರಿಗೆ ಸಂಕಷ್ಟ

ಸರ್ಕಾರದಿಂದ ನೀಡಲಾದ ಕೋವಿಡ್-19 ಮಾರ್ಗಸೂಚಿಗಳ ಕ್ರಮಗಳನ್ನು ಉಲ್ಲಂಘಿಸಿದಲ್ಲಿ ಸಂಬಂಧಿತ ಕಾಯ್ದೆಗಳ ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.