ETV Bharat / state

ಕಲಬುರಗಿಯಲ್ಲಿ ಮಾಸ್ಕ್ ಇಲ್ಲದಿದ್ರೆ 1,000 ರೂಪಾಯಿ ದಂಡ! - 1000 rupees fine for not wearing mask

ಕಲಬುರಗಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17 ಸಾವಿರ ದಾಟಿದ್ದು, ಸಾವಿನ ಸಂಖ್ಯೆ ಕೂಡ ಶರವೇಗದಲ್ಲಿ ಏರತೊಡಗಿದೆ. ಇಷ್ಟಾದರು ಜನ ತೆಲೆಕೆಡಿಸಿಕೊಳ್ಳದೆ ತಿರುಗಾಡುತ್ತಿದ್ದಾರೆ. ಹೀಗಾಗಿ ಮಾಸ್ಕ್ ಇಲ್ಲದವರನ್ನು ತಡೆದು ಜಾಗೃತಿ ಮೂಡಿಸುವುದರ ಜೊತೆಗೆ 1,000 ರೂಪಾಯಿ ದಂಡ ವಸೂಲು ಮಾಡಲಾಗುತ್ತಿದೆ.

fine
fine
author img

By

Published : Oct 1, 2020, 3:43 PM IST

ಕಲಬುರಗಿ: ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಗಣನೀಯವಾಗಿ ಹೆಚ್ಚುತಿರುವ ಹಿನ್ನೆಲೆ ಮಹಾನಗರ ಪಾಲಿಕೆ ಹೂಸ ಪ್ರಯತ್ನಕ್ಕೆ ಮುಂದಾಗಿದೆ.

ಕಲಬುರಗಿಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 17 ಸಾವಿರದ ಗಡಿ ದಾಟಿದ್ದು, ಸಾವಿನ ಸಂಖ್ಯೆ ಕೂಡ ಶರವೇಗದಲ್ಲಿ ಏರತೊಡಗಿದೆ. ಇಷ್ಟಾದರು ಜನ ತಲೆಕೆಡಿಸಿಕೊಳ್ಳದೆ ತಿರುಗಾಡುತ್ತಿದ್ದಾರೆ.

ಮಾಸ್ಕ್ ಧರಿಸದಿದ್ರೆ ಸಾವಿರ ರೂ. ದಂಡ

ಈ ನಿಟ್ಟಿನಲ್ಲಿ ಕಲಬುರಗಿ ಪಾಲಿಕೆ ಕೊರೊನಾ ತಡೆಗಟ್ಟಲು ದಂಡದ ಅಸ್ತ್ರ ಬಳಸಲು ಮುಂದಾಗಿದೆ. ನಗರದ ಸೂಪರ್​ ಮಾರ್ಕೆಟ್, ಸರ್ದಾರ್ ವಲ್ಲಭಭಾಯಿ ಪಟೇಲ್ ಬಸ್ ನಿಲ್ದಾಣ ಸೇರಿದಂತೆ ಹಲವೆಡೆ ದಂಡ ವಸೂಲಾತಿ ಆರಂಭಿಸಲಾಗಿದೆ.

ಮಹಾನಗರ ಪಾಲಿಕೆ ಅಧಿಕಾರಿ ಸಂಚಾರಿ ಪೊಲೀಸರ ಸಾಥ್ ನೀಡುತ್ತಿದ್ದಾರೆ. ಮಾಸ್ಕ್ ಇಲ್ಲದವರಿಗೆ ವಾಹನ ಸವಾರರನ್ನು ತಡೆದು ಜಾಗೃತಿ ಮೂಡಿಸುವುದರ ಜೊತೆಗೆ 1,000 ರೂಪಾಯಿ ದಂಡ ವಸೂಲು ಮಾಡಲಾಗುತ್ತಿದೆ.

ದೇಶದಲ್ಲಿ ಕೊರೊನಾದಿಂದ ಕಲಬುರಗಿಯಲ್ಲಿ ಮೊದಲ ಸಾವು ಸಂಭವಿಸಿದ್ದರೂ ಸಹ ಇಲ್ಲಿನ ಜನ ಇನ್ನೂ ಎಚ್ಚೆತ್ತುಕೊಳ್ಳದಿರುವುದು ಬೇಜವಾಬ್ದಾರಿತನದ ಪರಮಾವಧಿಯಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.