ರಾಣೆಬೆನ್ನೂರು: ದಿ. ಪುನೀತ್ ರಾಜಕುಮಾರ್ ಅಂದ್ರೆ ಅಭಿಮಾನಿಗಳ ಪಾಲಿನ ದೇವರು, ಯುವಕರ ಪಾಲಿಗೆ ಅದ್ಭುತ ಶಕ್ತಿ. ಇವರ ಅಗಲಿಕೆ ಬಹಳ ನೋವನ್ನು ತರಿಸಿದೆ. ಅಭಿಮಾನಿಗಳು ತಮ್ಮದೇ ಆದ ರೀತಿಯಲ್ಲಿ ನೆಚ್ಚಿನ ನಟ ಪುನೀತ್ಗೆ ಅಭಿಮಾನದ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ.
ಅದೇ ರೀತಿ ಹಾವೇರಿ ಜಿಲ್ಲೆಯ ರಾಣೆಬೆನ್ನೂರು ನಗರದ ವೀಣಾ ಚಿತ್ರಮಂದಿರದಲ್ಲಿ ಮೂರು ದಿನಗಳ ಕಾಲ ಉಚಿತವಾಗಿ ಯುವರತ್ನ ಚಿತ್ರ ಪದರ್ಶನ ನೀಡಲಾಗುತ್ತಿದೆ. ಪುನೀತ್ ರಾಜ್ಕುಮಾರ್ ಕೊನೆಯದಾಗಿ ನಟಿಸಿದ ಯುವರತ್ನ ಚಿತ್ರ ನೋಡಲು ಸಾರ್ವಜನಿಕರಿಗೆ ಉಚಿತವಾಗಿ ಅವಕಾಶ ಮಾಡಿಕೊಡಲಾಗಿದೆ.
ಚಿತ್ರಮಂದಿರದ ಮಾಲೀಕರಾದ ಶೇರಖಾನ್ ಕಾಬೂಲಿ ಅವರು ಪುನೀತ್ ರಾಜ್ಕುಮಾರ್ ಮೇಲೆ ಬಹಳ ಅಭಿಮಾನ ಹೊಂದಿದ್ದಾರೆ. ಅವರ ನಟಸಾರ್ವಭೌಮ ಚಿತ್ರವನ್ನು ಇದೇ ಚಿತ್ರಮಂದಿರದಲ್ಲಿ ಬಿಡುಗಡೆ ಮಾಡಲಾಗಿತ್ತು. ಅಲ್ಲದೇ ಚಿತ್ರ ಯಶಸ್ಸು ಕಂಡ ಹಿನ್ನೆಲೆ ಪುನೀತ್ ರಾಜ್ಕುಮಾರ್ ಚಿತ್ರಮಂದಿರಕ್ಕೆ ಭೇಟಿ ಕೊಡುವ ಮೂಲಕ ಮಾಲೀಕರ ಆಸೆಯನ್ನು ಈಡೇರಿಸಿ ಜನರ ಪ್ರೀತಿಗೆ ಪಾತ್ರರಾಗಿದ್ದರು. ಅವರ ಮೇಲಿನ ಅಭಿಮಾನದ ಸಲುವಾಗಿ ಮಂಗಳವಾರದಿಂದ(ನಿನ್ನೆಯಿಂದ) ಮೂರು ದಿನಗಳ ಕಾಲ ಯುವರತ್ನ ಚಿತ್ರವನ್ನು ಉಚಿತವಾಗಿ ಪ್ರದರ್ಶನ ಮಾಡ್ತಿದ್ದಾರೆ.
ಇದನ್ನೂ ಓದಿ: ಕೊಡಗು ಟಿಪ್ಪು ಜಯಂತಿ ಗಲಭೆಗೆ 6 ವರ್ಷ: ಜಿಲ್ಲೆಯಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್
ಪ್ರತಿದಿನ ನಾಲ್ಕರಂತೆ ಒಟ್ಟು ಹನ್ನೆರಡು ಶೋಗಳನ್ನು ಉಚಿತವಾಗಿ ಪ್ರದರ್ಶನ ಮಾಡ್ತಿದ್ದಾರೆ. ಒಟ್ಟು 900 ಆಸನಗಳನ್ನು ಹೊಂದಿರೋ ಚಿತ್ರಮಂದಿರಕ್ಕೆ ಅಭಿಮಾನಿಗಳು ಬಂದು ನೆಚ್ಚಿನ ನಟನ ಚಿತ್ರ ವೀಕ್ಷಣೆ ಮಾಡ್ತಿದ್ದಾರೆ.