ETV Bharat / state

ತುಂಗಭದ್ರಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ಯುವಕರಿಬ್ಬರು ನೀರುಪಾಲು - ತುಂಗಭದ್ರಾ ನದಿಯಲ್ಲಿ ಮೀನು ಹಿಡಿಯಲು ಹೋಗಿ ನದಿ ಪಾಲಾದ ಇಬ್ಬರು ಯುವಕರು

ಮೀನು ಹಿಡಿಯಲು ಹೋಗಿ ಇಬ್ಬರು ಯುವಕರು ನದಿಯಲ್ಲಿ ಮುಳಗಿ ಸಾವನ್ನಪ್ಪಿದ ಘಟನೆ ರಾಣೇಬೆನ್ನೂರು ತಾಲೂಕಿನಲ್ಲಿ ಸಂಭವಿಸಿದೆ.

ಮೀನು ಹಿಡಿಯಲು ಹೋಗಿ ನದಿ ಪಾಲಾದ ಇಬ್ಬರು ಯುವಕರು

author img

By

Published : Aug 29, 2021, 8:31 PM IST

ರಾಣೇಬೆನ್ನೂರು : ತುಂಗಭದ್ರಾ ‌ನದಿಯಲ್ಲಿ ಮೀನು ಹಿಡಿಯಲು ಹೋಗಿ ಇಬ್ಬರು ಯುವಕರು ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ತಾಲೂಕಿನ ಚೌಡಯ್ಯನದಾನಪುರ ಗ್ರಾಮದಲ್ಲಿ ನಡೆದಿದೆ. ಗುತ್ತಲ ಗ್ರಾಮದ ಫಕ್ಕಿರೇಶ ಹೊನ್ನಪ್ಪ ಮಣ್ಣೂರು (23) ಹಾಗೂ ಯಲ್ಲಪ್ಪ ಕುಂಬಾರ (34) ಎಂಬುವರು ನದಿಯಲ್ಲಿ ಮುಳಗಿದ ಯುವಕರು.

ಮೀನು ಹಿಡಿಯಲು ಹೋಗಿ ನದಿಪಾಲಾದ ಇಬ್ಬರು ಯುವಕರು

ಭಾನುವಾರವಾದ ಕಾರಣ ಇವರು ಮೀನು ಹಿಡಿಯಲು ಗುತ್ತಲ ಪಟ್ಟಣದಿಂದ ಚೌಡಯ್ಯನದಾನಪುರ ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ ಈಜುಬಾರದೆ ನದಿಯಲ್ಲಿ ಮುಳುಗಿದ್ದಾರೆ ಎನ್ನಲಾಗಿದೆ.

ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ರಾಣೇಬೆನ್ನೂರು ಗ್ರಾಮಾಂತರ ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿಯವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳೀಯರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಮೃತದೇಹಕ್ಕಾಗಿ ಶೋಧಕಾರ್ಯ ನಡೆಸಿದ್ದಾರೆ.

ಇದನ್ನೂ ಓದಿ : ರಸ್ತೆ ಅಪಘಾತ: ಗಾಯಾಳುಗಳ ಆಸ್ಪತ್ರೆಗೆ ಸಾಗಿಸಲು ನೆರವಾದ ಸಚಿವ ಸಿ.ಸಿ.ಪಾಟೀಲ್

ETV Bharat Logo

Copyright © 2025 Ushodaya Enterprises Pvt. Ltd., All Rights Reserved.