ಹಾವೇರಿ: ಎಮ್ಮೆಗಳನ್ನು ಹೊಡೆದುಕೊಂಡು ಬರ್ತಿದ್ದ ಯುವಕನ ಜೊತೆ ಪೊಲೀಸರು ಜಟಾಪಟಿ ನಡೆಸಿದ ಘಟನೆ ಇಲ್ಲಿನ ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ನಡೆದಿದೆ.
ಯುವಕ ಶಿವು ದೇಸೂರು ಎಂಬಾತ ಎಮ್ಮೆಗಳನ್ನು ಹೊಡೆದುಕೊಂಡು ಬರುತ್ತಿದ್ದ. ಈ ಸಂದರ್ಭದಲ್ಲಿ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಬರುತ್ತಿದ್ದ ಕಾರಣ ಪೊಲೀಸರು ಶಿವುಗೆ ರಸ್ತೆಯಲ್ಲಿದ್ದ ಎಮ್ಮೆಗಳನ್ನು ತೆರವುಗೊಳಿಸಲು ಹೇಳಿ ಲಾಠಿಯಿಂದ ಹೊಡೆದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಅದೇ ವೇಳೆ ಶಿವು ಕೂಡ ಪೊಲೀಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಶಿವು ತಂದೆ ಪರಿಸ್ಥಿತಿಯನ್ನು ತಿಳಿಗೊಳಿಸಿದರು.