ಹಾವೇರಿ: ಕುಡಿದ ಮತ್ತಿನಲ್ಲಿ ತಮ್ಮನನ್ನೇ ಅಣ್ಣ ಕೊಲೆ ಮಾಡಿರುವ ಘಟನೆ ಹಾವೇರಿ ತಾಲೂಕಿನ ಅಗಡಿಯಲ್ಲಿ ನಡೆದಿದೆ. ಈ ಕುರಿತು ಹಾವೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಲಂಚ ಪಡೆಯುವಾಗ ಎಸಿಬಿ ಬೆಲೆಗೆ ಬಿದ್ದ ಗ್ರಾಮ ಲೆಕ್ಕಾಧಿಕಾರಿ
ಅಣ್ಣ ನಾಗಪ್ಪ ಕೊಲೆಗೈದ ಆರೋಪಿಯಾಗಿದ್ದು, ಸಹೋದರನಾದ ಬಸವರಾಜ್ ಸಣ್ಣಮನಿ (36) ಕೊಲೆಯಾದ ಯುವಕನಾಗಿದ್ದಾನೆ. ಇಬ್ಬರು ಕುಡಿತಕ್ಕೆ ದಾಸರಾಗಿದ್ದು, ಭಾನುವಾರ ರಾತ್ರಿ ಕುಡಿಯುತ್ತಿದ್ದ ಸಂದರ್ಭದಲ್ಲಿ ನಾಗಪ್ಪ ತಮ್ಮನಿಗೆ ಹೊಡೆದಿದ್ದಾನೆ. ಬಸವರಾಜ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ವಿಪರ್ಯಾಸ ಎಂದರೆ ಕಟ್ಟೆಯ ಮೇಲಿಂದ ಬಿದ್ದು ಬಸವರಾಜ್ ಮೃತಪಟ್ಟಿದ್ದಾನೆ ಎಂದು ತಿಳಿದು ಆತನ ಸಂಬಂಧಿಕರು ಅಂತ್ಯಕ್ರಿಯೆಗೆ ಮುಂದಾಗಿದ್ದಾರೆ. ಆರೋಪಿ ಸಹ ಅದೇ ರೀತಿ ಹೇಳಿದ್ದಾನೆ. ಸಂಶಯಗೊಂಡ ಪೊಲೀಸರು ನಾಗಪ್ಪನನ್ನು ವಿಚಾರಿಸಿದಾಗ ನಿಜಾಂಶ ಬೆಳಕಿಗೆ ಬಂದಿದೆ.