ETV Bharat / state

ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಕುಸ್ತಿ ಪಂದ್ಯಾವಳಿ - ಹಾವೇರಿ ಕುಸ್ತಿ ಪಂದ್ಯಾವಳಿ

ಬಂಕಾಪುರದಲ್ಲಿ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ಮೂರು ದಿನಗಳ ಕಾಲ ಕುಸ್ತಿ ಪಂದ್ಯಾವಳಿ ನಡೆಯಿತು. ಮೊದಲ ದಿನ ನಿಕಾಲಿ ಕುಸ್ತಿಗಳು ನಡೆದರೆ, ಕೊನೆಯ ದಿನ ಕಡೇಕುಸ್ತಿಗಳು ನಡೆದವು. ಪೈಲ್ವಾನರ ವಯಸ್ಸಿನ ಆಧಾರದ ಮೇಲೆ ಕುಸ್ತಿಗಳನ್ನು ಆಡಿಸಲಾಗಿದ್ದು, ಪಂದ್ಯಾವಳಿ ವೀಕ್ಷಿಸಲು ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿದ್ದರು.

Wrestling tournament in bankapura topina durgadevi fair
ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯಿತು ಕುಸ್ತಿ ಪಂದ್ಯಾವಳಿ
author img

By

Published : Feb 3, 2021, 7:25 AM IST

ಹಾವೇರಿ: ಜಿಲ್ಲೆಯ ಶಿಗ್ಗಾವಿ ತಾಲೂಕಿನ ಬಂಕಾಪುರದಲ್ಲಿ ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವ ಸಂಭ್ರಮ ಮನೆಮಾಡಿತ್ತು. ಜಾತ್ರಾ ಮಹೋತ್ಸವದ ಅಂಗವಾಗಿ ಜಾತ್ರಾ ಸಮಿತಿ ಮೂರು ದಿನಗಳ ಕಾಲ ಕುಸ್ತಿ ಪಂದ್ಯಾವಳಿ ಆಯೋಜಿಸಿದ್ದು, ಕ್ರೀಡಾಪಟುಗಳಿಗೆ ಉತ್ತಮ ವೇದಿಕೆ ಸಿಕ್ಕಂತಾಗಿತ್ತು.

ತೋಪಿನ ದುರ್ಗಾದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆಯಿತು ಕುಸ್ತಿ ಪಂದ್ಯಾವಳಿ

ಜಾತ್ರಾ ಕಮಿಟಿ ಕಳೆದ 105 ವರ್ಷಗಳಿಂದ ಆಚರಿಸಿಕೊಂಡು ಬಂದಂತೆ ಪ್ರಸ್ತುತ ವರ್ಷವೂ ಕುಸ್ತಿ ಪಂದ್ಯಾವಳಿ ಆಯೋಜಿಸಿತ್ತು. ಈ ಪಂದ್ಯಾವಳಿಯಲ್ಲಿ ಮಹಾರಾಷ್ಟ್ರದ ಮಿರಜ್, ಕೊಲ್ಲಾಪುರ ಹಾಗೂ ರಾಜ್ಯದ ವಿವಿಧೆಡೆಯಿಂದ ನೂರಾರು ಕುಸ್ತಿಪಟುಗಳು ಪಾಲ್ಗೊಂಡಿದ್ದರು. ಬಯಲು ಜಂಗಿ ಕುಸ್ತಿಯಲ್ಲಿ ಪೈಲ್ವಾನರು ಉತ್ತಮ ಪ್ರದರ್ಶನ ನೀಡಿದ್ದು, ಕ್ರೀಡಾಭಿಮಾನಿಗಳಿಗೆ ಮನರಂಜನೆ ನೀಡಿದರು. ಪೈಲ್ವಾನರ ಪಟ್ಟುಗಳ ಪ್ರದರ್ಶನಕ್ಕೆ ಕ್ರೀಡಾಪ್ರೇಮಿಗಳು ಚಪ್ಪಾಳೆ ತಟ್ಟುವ ಮೂಲಕ ಹುರಿದುಂಬಿಸಿದರು.

ಮಹಾರಾಷ್ಟ್ರವಲ್ಲದೆ ರಾಜ್ಯದ ಧಾರವಾಡ, ಬೆಳಗಾವಿ, ದಾವಣಗೆರೆ ಬಾಗಲಕೋಟೆ ಸೇರಿದಂತೆ ವಿವಿಧ ಜಿಲ್ಲೆಗಳ ಕುಸ್ತಿಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. ಪರಸ್ಪರ ಎದುರಾಳಿಗಳಿಗೆ ತೊಡೆ ತಟ್ಟಿ ಕುಸ್ತಿಗೆ ಆಹ್ವಾನ ನೀಡಿದರು.

ಈ ಸುದ್ದಿಯನ್ನೂ ಓದಿ: 74 ಟನ್ ಕಬ್ಬು ಹೇರುವುದರ ಮೂಲಕ ದಾಖಲೆ!

ಮೊದಲ ದಿನ ನಿಕಾಲಿ ಕುಸ್ತಿಗಳು ನಡೆದರೆ, ಕೊನೆಯ ದಿನ ಕಡೇ ಕುಸ್ತಿಗಳು ನಡೆದವು. ಪೈಲ್ವಾನರ ವಯಸ್ಸಿನ ಆಧಾರದ ಮೇಲೆ ಕುಸ್ತಿಗಳನ್ನು ಆಡಿಸಲಾಯಿತು. ಕೊರೊನಾ ಆತಂಕದ ನಡುವೆಯೂ ಸಹ ಈ ಕುಸ್ತಿ ಪಂದ್ಯಾವಳಿ ನೋಡಲು ಸುತ್ತಮುತ್ತಲಿನ ಗ್ರಾಮಗಳಿಂದ ಸಾವಿರಾರು ಕ್ರೀಡಾಪ್ರೇಮಿಗಳು ಆಗಮಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.