ರಾಣೆಬೆನ್ನೂರು: ತಾಲೂಕು ಆಡಳಿತ ಮತ್ತು ಅರಣ್ಯ ಇಲಾಖೆಯಿಂದ ಇಂದು ವಿಶ್ವ ಪರಿಸರ ದಿನ ಆಚರಿಸಲಾಯಿತು.
ರಾಣೆಬೆನ್ನೂರು ನಗರದ ಪ್ರಾದೇಶಿಕ ಅರಣ್ಯ ವಲಯದಿಂದ ನಗರದ ಕೆ.ಎಚ್.ಬಿ.ಕಾಲೋನಿಯಲ್ಲಿ ಸಸಿ ನೆಡುವ ಮೂಲಕ ವಿಶ್ವ ಪರಿಸರ ದಿನ ಆಚರಿಸಲಾಯಿತು.
ತಹಶೀಲ್ದಾರ್ ಬಸನಗೌಡ ಕೊಟೂರು ಮಾತನಾಡಿ, ದೇಶದಲ್ಲಿ ಅರಣ್ಯ ಸಂಪತ್ತನ್ನು ಸಾರ್ವಜನಿಕರು ಉಳಿಸಬೇಕಾಗಿದೆ. ಈ ನಡುವೆ ಪ್ರಕೃತಿ ಮೇಲೆ ಅನೇಕ ಪರಿಣಾಮ ಬೀರುತ್ತಿದ್ದು, ಪರಿಸರ ನಾಶವಾಗುತ್ತಿದೆ. ಇಂದು ದೇಶಾದ್ಯಂತ ಹಸಿರು ಆಂದೋಲನ ನಡೆಯುತ್ತಿದ್ದು, ನಾವುಗಳು ಹಸಿರು ಉಳಿಸುವ ಕಾರ್ಯ ಮಾಡಬೇಕು ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಅರುಣಕುಮಾರ ಪೂಜಾರ, ನಗರ ಪ್ರಾಧಿಕಾರ ಅಧ್ಯಕ್ಷ ಚೋಳಪ್ಪ ಕಸವಾಳ, ಆರ್ಎಫ್ಒ ರವಿ ಹುಲಕೋಟಿ, ಇಒ ಎಸ್.ಎಮ್.ಕಾಂಬಳೆ, ತಾಪಂ ಅಧ್ಯಕ್ಷ ಗೀತಾ ಲಮಾಣಿ ಹಾಜರಿದ್ದರು.