ETV Bharat / state

ಮದುವೆಯಾದ 10 ತಿಂಗಳಲ್ಲೇ ನವವಿವಾಹಿತೆ ಶವವಾಗಿ ಪತ್ತೆ: ಪತಿ-ಅತ್ತೆಯ ಮೇಲೆ ಗುಮಾನಿ - ಹಾವೇರಿ ಇತ್ತೀಚಿನ ಸುದ್ದಿ

ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ಮಹಿಳೆವೋರ್ವಳ ಮೃತದೇಹ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ. ಈ ಸಾವಿನ ಸುತ್ತ ಅನುಮಾನ ಹುತ್ತ ಬೆಳೆದಿದೆ. ಆಕೆಯನ್ನು ಪತಿ ಮತ್ತು ಅತ್ತೆ ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

haveri
ಶ್ವೇತಾ ಚಿಕ್ಕೇರಿ
author img

By

Published : Apr 7, 2021, 9:30 AM IST

ಹಾವೇರಿ: ಗೃಹಿಣಿವೋರ್ವಳು ಅನುಮಾನಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಹಾನಗಲ್ ತಾಲೂಕಿನ ಅರಳೇಶ್ವರ ಗ್ರಾಮದಲ್ಲಿ ನಡೆದಿದೆ.

ಮೃತಳನ್ನು ಶ್ವೇತಾ ಚಿಕ್ಕೇರಿ (23) ಎಂದು ಗುರುತಿಸಲಾಗಿದೆ. ಶ್ವೇತಾಳ ಶವ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಆಕೆಯ ಪತಿ ಮತ್ತು ಅತ್ತೆ ಕೊಲೆ ಮಾಡಿ ನೇಣು ಹಾಕಿದ್ದಾರೆ ಎಂದು ಆರೋಪಿಸಿ ಶ್ವೇತಾಳ ತಂದೆ ಉಮೇಶ್ ಅವರು ಆಡೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ನೇಣು ಬಿಗಿದ ಸ್ಥಿತಿಯಲ್ಲಿ ಶ್ವೇತಾ ಚಿಕ್ಕೇರಿ ಶವ ಪತ್ತೆ

ಹಾವೇರಿ ತಾಲೂಕಿನ ಆಲದಕಟ್ಟಿಯ ಶ್ವೇತಾಳನ್ನ ಕಳೆದ 10 ತಿಂಗಳ ಹಿಂದೆ ಶಿಕ್ಷಕನಾಗಿದ್ದ ಅರಳೇಶ್ವರದ ವಿಶ್ವನಾಥ್‌ಗೆ ಮದುವೆ ಮಾಡಿಕೊಡಲಾಗಿತ್ತು. ಆದರೆ ಅಂದಿನಿಂದ ವಿಶ್ವನಾಥ ಮತ್ತು ಅತ್ತೆ ಗೌರಮ್ಮ ಹಿಂಸೆ ನೀಡಿದ್ದಾರೆ ಎಂದು ಉಮೇಶ್​ ಆರೋಪಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಡಿವೈಎಸ್ಪಿ ಕಲ್ಲೇಶಪ್ಪ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಘಟನೆಗೆ ಸಂಬಂಧಿಸಿದಂತೆ ಆರೋಪಿಗಳಾದ ವಿಶ್ವನಾಥ್ ಮತ್ತು ಗೌರಮ್ಮನನ್ನ ಬಂಧಿಸಿ ವಿಚಾರಣೆ ನಡೆಸಲಾಗುತ್ತಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.