ಹಾವೇರಿ: ತಾಲೂಕಿನ ಹೊಸರಿತ್ತಿ ಗ್ರಾಮದ ಪುಟ್ಟಮ್ಮ ಗೋಪಾಳಿ (68) ಜಿಲ್ಲಾಸ್ಪತ್ರೆಯಲ್ಲಿ ಸಾವನ್ನಪ್ಪಿದ್ದು, ಕೋವಿಡ್19 ನಿಯಮಾನುಸಾರ ಅಂತ್ಯಕ್ರಿಯೆ ಮಾಡಲಾಗಿದೆ.
ಅಂತ್ಯ ಸಂಸ್ಕಾರದ ವೇಳೆ ಪಿಪಿಇ ಕಿಟ್ ಬಳಸಲಾಗಿದ್ದು, ಆರೋಗ್ಯ ಇಲಾಖೆ ಹಾಗೂ ತಹಶೀಲ್ದಾರರ ಸಮ್ಮುಖದಲ್ಲಿ ಅಂತ್ಯಸಂಸ್ಕಾರ ಮಾಡಾಲಾಗಿದೆ.
ಈ ವೃದ್ಧೆ ನಿನ್ನೆ ರಾತ್ರಿ ಮೃತಪಟ್ಟಿದ್ದು, ಇವರ ಸ್ವ್ಯಾಬ್ ಅನ್ನು ಲ್ಯಾಬ್ಗೆ ಕಳಿಸಿರುವ ಆರೋಗ್ಯ ಇಲಾಖೆ, ವರದಿಗಾಗಿ ಕಾಯುತ್ತಿದೆ.
ಅಂತ್ಯಕ್ರಿಯೆ ವೇಳೆ ಕುಟುಂಬಸ್ಥರು ಹಾಗೂ ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಿಬ್ಬಂದಿ ಭಾಗಿಯಾಗಿದ್ದರು.