ETV Bharat / state

ಗ್ರಾಮದಿಂದ ದೂರ ಇದೆಯಂತೆ ಸ್ಮಶಾನ: ರಸ್ತೆಬದಿಯೇ ಅಂತ್ಯಸಂಸ್ಕಾರ ಮಾಡಿದ ಗ್ರಾಮಸ್ಥರು

ಈಗ ಇರುವ ಸ್ಮಶಾನ ಗ್ರಾಮದಿಂದ ಆರು ಕಿಲೋಮೀಟರ್ ದೂರವಿದೆ. ಗ್ರಾಮದ ಸಮೀಪ ಸ್ಮಶಾನ ಕೇಳಿದರೂ ಸಂಬಂಧಿಸಿದ ಆಡಳಿತ ಇಲಾಖೆ ಅನುವು ಮಾಡಿಕೊಡುತ್ತಿಲ್ಲವಂತೆ. ಹೀಗಾಗಿ ಗ್ರಾಮಸ್ಥರು ರಸ್ತೆಬದಿಯಲ್ಲೇ ಅಂತ್ಯ ಸಂಸ್ಕಾರ ಮಾಡಿದ್ದಾರೆ.

http://10.10.50.85//karnataka/09-September-2021/kn-hvr-01-body-burn-road-7202143_09092021223151_0909f_1631206911_415.png
ಗ್ರಾಮದಿಂದ ದೂರು ಇದೆಯಂತೆ ಸ್ಮಶಾನ
author img

By

Published : Sep 9, 2021, 10:56 PM IST

Updated : Sep 10, 2021, 4:20 AM IST

ಹಾವೇರಿ: ಗ್ರಾಮದಿಂದ 6 ಕಿಲೋ ಮೀಟರ್​ ದೂರದಲ್ಲಿ ರುದ್ರಭೂಮಿ ಇರುವ ಕಾರಣ ಶವವನ್ನು ರಸ್ತೆಬದಿಯೇ ಇಟ್ಟು ಸುಟ್ಟಿರುವ ಘಟನೆ ಜಿಲ್ಲೆಯ ಸವಣೂರು ತಾಲೂಕಿನ ತೊಂಡೂರು ಗ್ರಾಮದಲ್ಲಿ ನಡೆದಿದೆ.

ಗ್ರಾಮದ ಈರಪ್ಪ ಬಡಿಗೇರ್ (35) ಎಂಬ ವ್ಯಕ್ತಿ ಇಂದು ಅಸುನೀಗಿದ್ದ. ಈ ಹಿನ್ನೆಲೆಯಲ್ಲಿ ಗ್ರಾಮಸ್ಥರು ಶವವನ್ನು ರಸ್ತೆಯ ಪಕ್ಕದಲ್ಲಿ ಇಟ್ಟು ಸುಟ್ಟಿದ್ದಾರೆ. ಈಗ ಇರುವ ಸ್ಮಶಾನ ಗ್ರಾಮದಿಂದ ಆರು ಕಿಲೋಮೀಟರ್ ದೂರವಿದೆ. ಗ್ರಾಮದ ಸಮೀಪ ಸ್ಮಶಾನ ಕೇಳಿದರೂ ಸಂಬಂಧಿಸಿದ ಆಡಳಿತ ಇಲಾಖೆ ಅನುವು ಮಾಡಿಕೊಡುತ್ತಿಲ್ಲವಂತೆ. ಇದರಿಂದ ಮಳೆಗಾಲ ಸೇರಿದಂತೆ ಇತರ ಕಾರಣಗಳಿಂದ ತಾವು ಆರು ಕಿಲೋಮೀಟರ್ ದೂರದ ರುದ್ರಭೂಮಿಗೆ ತೆರಳಲು ಕಷ್ಟವಾಗಿದೆ ಎಂದು ಗ್ರಾಮಸ್ಥರು ನೋವು ತೋಡಿಕೊಂಡಿದ್ದಾರೆ.

ರಸ್ತೆಬದಿಯೇ ಅಂತ್ಯಸಂಸ್ಕಾರ ಮಾಡಿದ ಗ್ರಾಮಸ್ಥರು

ಸ್ಮಶಾನ ಬಹಳ ದೂರ ಇದ್ದುದ್ದರಿಂದ ಗ್ರಾಮದ ಪಕ್ಕದಲ್ಲಿರುವ ರಸ್ತೆಯಲ್ಲಿಯೇ ಶವವನ್ನು ಸುಡುತ್ತಿದ್ದೇವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

Last Updated : Sep 10, 2021, 4:20 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.