ಹಾವೇರಿ: ಕೊರೊನಾದಿಂದ ಮೃತಪಟ್ಟವರನ್ನು ಗ್ರಾಮದ ಪಕ್ಕದಲ್ಲಿ ಅಂತ್ಯಕ್ರಿಯೆ ಮಾಡುತ್ತಿರುವುದನ್ನು ಖಂಡಿಸಿ ರಸ್ತೆ ತಡೆದು ಪ್ರತಿಭಟನೆ ನಡೆಸಿದ ಘಟನೆ ರಾಣೆಬೆನ್ನೂರು ತಾಲೂಕಿನ ಗೋವಿಂದ ಬಡಾವಣೆ ತಾಂಡ ಬಳಿ ನಡೆದಿದೆ.
ತಾಲೂಕಿನಲ್ಲಿ ಕೊರೊನಾ ಸೊಂಕಿನಿಂದ ಮೃತಪಟ್ಟವರನ್ನು ಅಂತ್ಯಕ್ರಿಯೆ ಮಾಡಲು ಜಿಲ್ಲಾಡಳಿತ ಮೆಡ್ಲೇರಿ ರಸ್ತೆಯ ಸರ್ಕಾರಿ ಜಮೀನಿನಲ್ಲಿ ವ್ಯವಸ್ಥೆ ಮಾಡಿದೆ. ಆದರೆ ಈ ಜಮೀನು ಪಕ್ಕದಲ್ಲಿ ಗಂಗಾಜಲತಾಂಡಾ, ಬಸಲೀಕಟ್ಟಿ ತಾಂಡಾ, ಗೋಂವಿಂದ ಬಡಾವಣೆ ಗ್ರಾಮಗಳು ಬರುತ್ತವೆ. ಇಲ್ಲಿ ಅಂತ್ಯಕ್ರಿಯೆ ಮಾಡಿದರೆ ಗ್ರಾಮದ ಜನಕ್ಕೂ ಕೊರೊನಾ ಹರಡಬಹುದು ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಗ್ರಾಮದ ಜನರು ನಿನ್ನೆ ರಾಣೆಬೆನ್ನೂರು ಶಾಸಕರನ್ನು ಭೇಟಿ ಮಾಡಿ ಯಾವುದೇ ಕಾರಣಕ್ಕೂ ಅಂತ್ಯಕ್ರಿಯೆ ಮಾಡುವುದಕ್ಕೆ ಅನುವು ಮಾಡಿಕೊಡಬೇಡಿ ಎಂದು ಮನವಿ ಸಹ ಮಾಡಿದ್ದಾರೆ. ಆದರೆ ಶಾಸರು ಕ್ರಮ ಕೈಗೊಳ್ಳದ ಕಾರಣ ಘೋಷಣೆ ಕೂಗಿ ಆಕ್ರೋಶ ಹೊರಹಾಕಿದರು.