ETV Bharat / state

ನಾಡು, ನುಡಿ ಜಾಗೃತಿಗಾಗಿ ಹ್ಯಾಂಡಲ್ ಇಲ್ಲದ ಬೈಕ್​ನಲ್ಲಿ ಹಾವೇರಿಗೆ ಹೊರಟ ಸಾಹಸಿ, 360 ಕಿ.ಮೀ ಪ್ರಯಾಣ! - Bike Sahasi Veeranna Kundaragimath

ಹಾವೇರಿ ನಗರದಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಈ ಬೆನ್ನಲ್ಲೇ ಇಳಕಲ್ಲ ಮೂಲದ ವ್ಯಕ್ತಿಯೊಬ್ಬರು ನಾಡು ನುಡಿಗಾಗಿ ವಿಶೇಷ ಬೈಕ್ ಸವಾರಿ ಕೈಗೊಂಡಿದ್ದಾರೆ.

veeranna kundaragimath
ವೀರಣ್ಣ ಕುಂದರಗಿಮಠ
author img

By

Published : Jan 4, 2023, 10:49 AM IST

Updated : Jan 4, 2023, 12:47 PM IST

ಕನ್ನಡ ನಾಡು, ನುಡಿಗಾಗಿ ಹೀಗೊಂದು ವಿಭಿನ್ನ ಜಾಗೃತಿ!

ಕುಷ್ಟಗಿ: ಜನವರಿ 6ರಿಂದ ಹಾವೇರಿಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ನುಡಿ ಜಾತ್ರೆ ನಡೆಯಲಿದೆ. ಇದರ ಅಂಗವಾಗಿ ಮಾತೃಭಾಷೆಯ ಕುರಿತು ಜಾಗೃತಿ ಮೂಡಿಸಲು ಹಾಗೂ ಸಮ್ಮೇಳನದ ಯಶಸ್ವಿಗೆ ಇಳಕಲ್ಲ ಬೈಕ್ ಸಾಹಸಿ ವೀರಣ್ಣ ಕುಂದರಗಿಮಠ ವಿಶೇಷ ಬೈಕ್ ಸಾಹಸ ಕೈಗೊಂಡಿದ್ದಾರೆ. ಹ್ಯಾಂಡಲ್ ಇಲ್ಲದ ಬೈಕ್​ನಲ್ಲಿ ಕನ್ನಡ ಧ್ವಜ ಹಿಡಿದು ಬಾಗಲಕೋಟೆ ಜಿಲ್ಲಾಡಳಿತ ಭವನದಿಂದ ಹಾವೇರಿಗೆ 360 ಕಿಮೀ ದೂರದ ಪ್ರಯಾಣ ಬೆಳೆಸಿದ್ದಾರೆ.

ಇಳಕಲ್ಲ ಮೂಲದ ಕೃಷಿ ಕುಟುಂಬದಲ್ಲಿ ಜನಿಸಿದ ವೀರಣ್ಣ ಕುಂದರಗಿಮಠ ಬೆಳಗ್ಗೆ 7:30ಕ್ಕೆ ಜಿಲ್ಲಾಡಳಿತ ಭವನದಿಂದ ಹುನಗುಂದ, ಇಳಕಲ್ಲ, ಕುಷ್ಟಗಿ, ಗದಗ, ಹುಬ್ಬಳ್ಳಿ ಬಂಕಾಪೂರ ಚೌಕ, ಶಿಗ್ಗಾವಿ, ಹಾನಗಲ್ ಮೂಲಕ ಸಾಗಿ ಹಾವೇರಿಯ ಸಮ್ಮೇಳನ ಸ್ಥಳ ತಲುಪುವ ನಿಗದಿತ ಗುರಿಯೊಂದಿಗೆ ಈ ಪಯಣ ಶುರು ಮಾಡಿದ್ದಾರೆ. ಮಾರ್ಗದುದ್ದಕ್ಕೂ ಇವರಿಗೆ ಮೆಚ್ಚುಗೆ ವ್ಯಕ್ತವಾಗುತ್ತಿದ್ದು, ಜನರು ಹೂವಿನ ಹಾರ ಹಾಕಿ, ಸಿಹಿ ತಿನಿಸುವ ಮೂಲಕ ಶುಭ ಹಾರೈಸುತ್ತಿದ್ದಾರೆ.

ಬೈಕ್​ ಸಾಹಸಿ ವೀರಣ್ಣ ಕುಂದರಗಿಮಠ ಮಾತನಾಡಿ, 'ಹ್ಯಾಂಡಲ್ ಇಲ್ಲದ ಬೈಕ್​ ಓಡಿಸುವ ಮೂಲಕ ಕನ್ನಡ ನಾಡು, ನುಡಿಯ ಕುರಿತು ಜಾಗೃತಿ ಮೂಡಿಸುವ ವಿಶೇಷ ಕಾರ್ಯ ಹಮ್ಮಿಕೊಂಡಿದ್ದೇನೆ. ಇದಕ್ಕೆ ಎಲ್ಲರ ಸಹಕಾರವಿದೆ. ಹೋದ ಕಡೆಗಳಲ್ಲಿ ಜನರು ಪ್ರೋತ್ಸಾಹಿಸುತ್ತಿದ್ದಾರೆ. ಈ ಬೈಕ್ ಅನ್ನು ತಾಳ್ಮೆ, ತಾಂತ್ರಿಕತೆ ಸಮತೋಲನದಿಂದ ಚಲಾಯಿಸುತ್ತಿರುವೆ. ಮಳೆ, ಗಾಳಿ ಸಂದರ್ಭದಲ್ಲಿ ಇಂಥ ಸಾಹಸ ಸಾಧ್ಯವಿಲ್ಲ. ಹೀಗಾಗಿ, ನಿಧಾನವಾಗಿ ಹ್ಯಾಂಡಲ್ ಇಲ್ಲದ ಬೈಕ್​ನೊಂದಿಗೆ ಹಾವೇರಿವರೆಗೂ ಹೊರಟಿದ್ದೇನೆ. ಬೈಕ್ ಮೇಲೆ ವೀರಗಂಗಾಧರ ಶ್ರೀ, ಹಾನಗಲ್ ಕುಮಾರಸ್ವಾಮಿ, ಸಿದ್ಧಗಂಗಾ ಶ್ರೀ, ಗದುಗಿನ ಪುಟ್ಟರಾಜ ಇಳಕಲ್ಲ ಮಹಾಂತ ಶಿವಯೋಗಿಗಳ ಭಾವಚಿತ್ರದ ಜೊತೆಗೆ ದಿ.ಪುನೀತ್​ ರಾಜ್​ಕುಮಾರ್ ಅವರ ಫೋಟೋಗಳನ್ನು ಅಳವಡಿಸಿಕೊಂಡಿದ್ದೇನೆ. ಸೋಮವಾರ ರಾತ್ರಿ ( ಜ.2) ವಿಜಯಪುರದ ಸಿದ್ಧೇಶ್ವರ ಶ್ರೀಗಳು ಲಿಂಗೈಕ್ಯರಾದ ವಿಷಯ ಕೇಳಿ ಅವರ ಚಿತ್ರವನ್ನೂ ಸಹ ಹಾಕಿದ್ದೇನೆ. ಅವರಿಗೆ ಶ್ರದ್ಧಾಂಜಲಿ ಪೂರ್ವಕವಾಗಿ ಫಲ, ನೀರು ಮಾತ್ರ ಸೇವಿಸಿ ಈ ಯಾತ್ರೆ ಕೈಗೊಂಡಿದ್ದೇನೆ' ಎಂದರು.

ಇದನ್ನೂ ಓದಿ: ಕನ್ನಡ ಸಾಹಿತ್ಯ ಸಮ್ಮೇಳನ : ಮಹಿಳೆಯರ ಸೇವೆಗೆ ಮಹಿಳಾ ಸ್ತ್ರೀ ಶಕ್ತಿ ಸಮಿತಿ

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ..: ಹಾವೇರಿ ನಗರದಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ದಿನಗಣನೆ ಆರಂಭವಾಗಿದೆ. ಜನವರಿ 6, 7 ಮತ್ತು 8 ರಂದು ನಡೆಯುವ ಸಮ್ಮೇಳನಕ್ಕೆ ಎಲ್ಲಾ ರೀತಿಯ ತಯಾರಿ ನಡೆಯುತ್ತಿದೆ. ಇದೇ ಮೊದಲ ಬಾರಿಗೆ ಹಾವೇರಿ ನಗರದಲ್ಲಿ ಸಮ್ಮೇಳನ ಆಯೋಜಿಸಲಾಗಿದೆ.

ಇದನ್ನೂ ಓದಿ: 86ನೇ ಕನ್ನಡ ಸಾಹಿತ್ಯ ಸಮ್ಮೇಳನ.. ಸರ್ಕಾರಿ ಕಚೇರಿಗಳ ಗೋಡೆ ಮೇಲೆ ವರ್ಲಿ, ರಿಯಾಲಿಸ್ಟಿಕ್ ಮತ್ತು ತ್ರಿಡಿ ಚಿತ್ರ ರಂಗು

Last Updated : Jan 4, 2023, 12:47 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.