ರಾಣೆಬೆನ್ನೂರು: ಮರಳು ತೆಗೆಯಲು ಹೋದ ಇಬ್ಬರು ಯುವಕರು ಎತ್ತುಗಳೊಂದಿಗೆ ನೀರುಪಾಲು - Two youths washed away in Thungabhadra river of Ranebennuru
ಮರಳು ತುಂಬಿಕೊಂಡು ಬರಲು ನದಿಗೆ ಹೋದ ಇಬ್ಬರು ಯುವಕರು ಎತ್ತುಗಳೊಂದಿಗೆ ನೀರು ಪಾಲಾದ ಘಟನೆ ರಾಣೆಬೆನ್ನೂರು ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿ ನಡೆದಿದೆ.
ರಾಣೆಬೆನ್ನೂರು: ತುಂಗಭದ್ರಾ ನದಿಯಲ್ಲಿ ಮರಳು ತೆಗೆಯಲು ಹೋಗಿದ್ದ ವೇಳೆ ಇಬ್ಬರು ಯುವಕರು ಸೇರಿದಂತೆ ಎತ್ತುಗಳು ನೀರು ಪಾಲಾಗಿರುವ ಘಟನೆ ತಾಲೂಕಿನ ಕೋಣನತಂಬಗಿ ಗ್ರಾಮದಲ್ಲಿ ಸಂಭವಿಸಿದೆ.
ತಾಲೂಕಿನ ಆರೇಮಲ್ಲಾಪುರ ಗ್ರಾಮದ ಜಗದೀಶ ಅಣ್ಣೇರ (25) ಹಾಗೂ ಬೆಟ್ಟಪ್ಪ ಮಿಳ್ಳಿ (23) ನೀರು ಪಾಲಾದ ಯುವಕರು. ಇಂದು ಬೆಳಗ್ಗೆ ಎತ್ತಿನ ಗಾಡಿಯಲ್ಲಿ ಮರಳು ತುಂಬಿಕೊಂಡು ಬರಲು ಕೋಣನತಂಬಗಿ ಗ್ರಾಮದ ತುಂಗಭದ್ರಾ ನದಿಗೆ ಹೋಗಿದ್ದರು. ನದಿಯಲ್ಲಿ ಮರಳು ತುಂಬಿ ದಂಡೆಗೆ ಬರುವಾಗ ನೀರಿನ ಹರಿವು ಹೆಚ್ಚಾಗಿದೆ. ಈ ಈ ವೇಳೆ ಎತ್ತುಗಳು ಮೇಲೆ ಬರಲು ಸಾಧ್ಯವಾಗದೆ ಸಿಲುಕಿಕೊಂಡಿದ್ದು, ಎತ್ತುಗಳ ಜೊತೆ ಯುವಕರು ನೀರಿನಲ್ಲಿ ಕೊಚ್ಚಿಕೊಂಡು ಹೋಗಿದ್ದಾರೆ.
ಸದ್ಯ ಒಂದು ಎತ್ತು ಪತ್ತೆಯಾಗಿದ್ದು, ಇನ್ನೊಂದು ಎತ್ತು ಮತ್ತು ಯುವಕರು ಪತ್ತೆಯಾಗಿಲ್ಲ. ರಾಣೆಬೆನ್ನೂರು ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.