ರಾಣೆಬೆನ್ನೂರು: ತುಂಗಾಭದ್ರ ನದಿಯಲ್ಲಿ ಮರಳು ತುಂಬಲು ಹೋಗಿ ನಾಪತ್ತೆಯಾಗಿದ್ದ ಇಬ್ಬರು ಯುವಕರ ಶವಗಳು ಸೋಮಲಾಪುರ ಗ್ರಾಮದಲ್ಲಿ ಪತ್ತೆಯಾಗಿವೆ.
ತಾಲೂಕಿನ ಅರೇಮಲ್ಲಾಪುರ ಗ್ರಾಮದ ಜಗದೀಶ ಐರಣಿ(25) ಹಾಗೂ ಬೆಟ್ಟಪ್ಪ ಮಿಳ್ಳಿ(23) ಮೃತ ದುರ್ದೈವಿಗಳು. ಇವರು ಕೋಣನತಂಬಗಿ ಗ್ರಾಮದಲ್ಲಿ ಮರಳು ತುಂಬಲು ಹೋದಾಗ ನದಿಯಲ್ಲಿ ನೀರಿನ ಹರಿವು ಹೆಚ್ಚಾಗಿ ಎತ್ತುಗಳ ಜತೆಗೆ ಕೊಚ್ಚಿ ಹೋಗಿದ್ದರು.
ಘಟನೆ ನಡೆದು ಮೂರು ದಿನಗಳ ನಂತರ ಶವಗಳು ಪತ್ತೆಯಾಗಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.